ಕಥೆಗಾರ್ತೀ, ಕಾದಂಬರಿಗಾರ್ತಿ ಎಂ.ಕೆ.ಇಂದಿರಾ ಅವರ ಕೃತಿ ‘ತಗ್ಗಿನ ಮನೆ ಸೀತೆ’. ವನಿತಾ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದ ತಗ್ಗಿನಮನೆ ಸೀತೆ ಇಂದಿರಾರವರ ರಸಮಯ ಕಾದಂಬರಿಗಳಲ್ಲೊಂದು. ಸೊಗಸಾಗಿ ...ಸರಾಗವಾಗಿ ಓದಿಸಿಕೊಂಡು ಹೋಗುವ ಈ ಕಾದಂಬರಿಯನ್ನು ಓದಿ ತಿಳಿಯಬೇಕು. ಹೋದ ದಶಕದ ಮಲೆನಾಡಿನ ಅದ್ಭುತವಾದ ಚಿತ್ರಣ ಇದರಲ್ಲಿದೆ.ಶೋಷಿತರ ಪರವಾದ ಬರವಣಿಗೆ ಈ ಕೃತಿಯಲ್ಲಿ ಸೂಚ್ಯವಾಗಿದೆ. .ಹೆಣ್ಣು ದಿಟ್ಟವಾಗಿ ಸಮಾಜವನ್ನು ಎದುರಿಸಬೇಕು ಎನ್ನುವುದು ಈ ಕೃತಿಯಲ್ಲಿ ಸೀತೆಯ ಮುಖಾಂತರ ಅವರ ವ್ಯಕ್ತಪಡಿಸುವ ಆಶಯ. ಸೀತೆ ಎಂಬ ಹೆಸರು ಇಟ್ಟುಕೊಂಡರೂ ಸಹ ಇಲ್ಲಿನ ಸೀತೆಯು ಪುರಾಣದ ಸೀತೆಯಂತೆ ಅನ್ಯಾಯವನ್ನು ಮೌನವಾಗಿ ಸಹಿಸುವವಳಲ್ಲ ... ಒಂದು ರೀತಿಯಲ್ಲಿ ಲೇಖಕಿ ಇಂದಿರಾ ಒಬ್ಬ ಹೆಣ್ಣು ಹೇಗಿರಬೇಕು ಎಂದು ಬಯಸುತ್ತಿದ್ದರೋ ಸೀತೆ ಥೇಟ್ ಹಾಗೆಯೇ ಇದ್ದಾಳೆ...
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು 05-01-1917 ರಂದು. ಊರು ಮಲೆನಾಡಿನ ತೀರ್ಥಹಳ್ಳಿ. ತಂದೆ ತರೀಕೆರೆ ಸೂರ್ಯನಾರಾಯಣ, ತಾಯಿ ಬನಶಂಕರಮ್ಮ. ಇಂದಿರಾ ಓದಿದ್ದು, ಕನ್ನಡ ಮಾಧ್ಯಮಿಕ ಶಾಲೆಯ 2ನೇಯ ತರಗತಿವರೆಗೆ ಮಾತ್ರ. ತಮ್ಮ 12 ವರ್ಷಕ್ಕೆ ಮದುವೆಯಾಯಿತು. ಅವರು ಬರೆಯಲು ಆರಂಭಿಸಿದ್ದು 1963ರಲ್ಲಿ. ತುಂಗಭದ್ರ ಅವರ ಮೊದಲ ಕೃತಿ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು.ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ"."ತುಂಗಭದ್ರೆ"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ...
READ MORE