ಸ್ವರ ಬೇತಾಳ ಯಂಡಮೂರಿ ವಿರೇಂದ್ರನಾಥ್ ಅವರು ರಚಿಸಿರುವ ಕಾದಂಬರಿಯಾಗಿದೆ. ಅವನು ಕೊಲೆ ಮಾಡಿದನೆಂದು ಎಲ್ರಿರಿಗೂ ಗೊತ್ತು. ನಾಲ್ವರು ನೋಡುತ್ತಿದ್ದಂತೆ ಕೊಲೆ ಮಾಡಿದ ಕೆಳಗಿನ ನ್ಯಾಯಾಲಯ ಅವನಿಗೆ ನೇಣುಶಿಕ್ಷೆ ವಿಧಿಸಿತು. ಉಚ್ಚ ನ್ಯಾಯಾಲಯ ಅವನನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿತು. ಕಾರಣ? ಐ.ಪಿ.ಸಿ. ಸೆಕ್ಷನ್-84 ನೇಣುಶಿಕ್ಷೆಯ ಮೇಲೆ ಧ್ವಜವು 'ಅಭಿಲಾಷೆ' ಕಾದಂಬರಿಯ ಮೂಲಕ ಓದುಗರನ್ನು ಭಾವೋದ್ರೇಕದಿಂದ ನಡುಗಿಸಿದ ಲೇಖಕ ಈ ಸಲ ಸರ್ಪದೊಂದಿಗೆ ಪಯಾನಕವನ್ನೂ ಬೆರೆಸಿ ನ್ಯಾಯಶಾಸ್ತ್ರದ ಮತ್ತೊಂದು ಬಲಿಯನ್ನು ಸ್ಪರ್ಶಿಸಲು ಮಾಡಿದ ಪ್ರಯತ್ನವೇ ಸ್ವರಬೇತಾಳ ಎಂದು ಪುಸ್ತಕದ ಬೆನ್ನುಡಿಯಲ್ಲಿ ಯಂಡಮೂರಿ ವೀರೇಂದ್ರನಾಥ್ ಅವರು ತಿಳಿಸಿದ್ದಾರೆ.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE