ಸ್ವಪ್ನವೇ ಎಚ್ಚರ ಎಂಬ ನಸುಬೆಚ್ಚಗಿನ ಸತ್ಯವನ್ನು ನಮ್ಮ ಮುಂದಿಡುವ ಕಾದಂಬರಿ ಇದು. ಸೀತೆಯನ್ನು ಹುಡುಕುತ್ತ ಹೋಗುವ ರಾಮ ಹುಡುಕಾಟದ ಅಂತ್ಯದಲ್ಲಿ ತನ್ನನ್ನು ತಾನೇ ಕಂಡುಕೊಳ್ಳುವಂತೆ ಇಲ್ಲಿನ ಕಥಾನಾಯಕ ಸ್ವಪ್ನಗಿರಿಯ ಬೆಟ್ಟದ ಊರಿನಲ್ಲಿ ತನ್ನನ್ನು ಕಂಡುಕೊಳ್ಳುತ್ತಾನೆ. ಮಂಜು ಕವಿದ ಮಸುಕು ಮಸುಕಾದ ಆವರಣದಲ್ಲಿ ನಡೆಯುವ ಇಲ್ಲಿನ ಘಟನೆಗಳು ತಮ್ಮ ಅಸ್ಪಷ್ಟತೆಯಿಂದಲೇ ನಮ್ಮೊಳಗಿನ ಸ್ಪಂದನದ ಬಿಂದುಗಳನ್ನು ಉದ್ದೀಪಿಸುತ್ತವೆ. ಸ್ಲೀಪ್ ಪ್ಯಾರಲಿಸಿಸ್, ಯಕ್ಷಗಾನ, ಅಮ್ಮನ ಕಥೆ, ಮಳೆ, ಕೆಂಪಿರುವೆ ಚಟ್ನಿ, ತುಂಗೆ, ಗಂಗಾವಿಶ್ವೇಶ್ವರ, ಜಾತ್ರೆ ಎಲ್ಲವೂ ಸೇರಿದ ಈ ಕಾದಂಬರಿ ಓದಿದ ನಂತರ ನಮ್ಮಲ್ಲಿ ಮರುಹುಟ್ಟು ಪಡೆಯಬಲ್ಲ ಗಾಢತೆಯನ್ನು ಹೊಂದಿವೆ. -ಹರೀಶ ಕೇರ
ಪದಚಿಹ್ನ ಎಂಬ ಕಾವ್ಯನಾಮ ಹೊಂದಿರುವ ಇವರು ಹುಟ್ಟಿದ್ದು ಮಲೆನಾಡಿನ ಸುಂದರ ಊರು ತೀರ್ಥಹಳ್ಳಿಯಲ್ಲಿ ಮತ್ತು ಬೆಳೆದಿದ್ದು ಕರಾವಳಿಯ ಕುಮಟಾದಲ್ಲಿ. ಬೆಂಗಳೂರೆಂಬ ಮಾಯಾನಗರಿಯಲ್ಲಿ ಪ್ರಸ್ತುತ ವಾಸ. ಇಂಜಿನಿಯರಿಂಗ್ ಓದಿ ಪ್ರಸ್ತುತ ಪತ್ರಿಕೋದ್ಯಮದಲ್ಲಿ ವೃತ್ತಿ, ಅದಕ್ಕೆ ಕಾರಣ ಬರವಣಿಗೆಯ ಮೇಲಿರುವ ಪ್ರೀತಿ. ಕಲೆ, ಸಾಹಿತ್ಯ, ರಂಗಭೂಮಿ, ಮಾತುಗಾರಿಕೆ, ಹಾಸ್ಯ, ಎಲ್ಲದರಲ್ಲೂ ಅಪಾರ ಆಸಕ್ತಿ. ಸಮಾಜಮುಖಿ ಕೆಲಸಗಳನ್ನು ಮಾಡಲು ಪರಹಿತಮ್ ಫೌಂಡೇಶನ್ ಎಂಬ ಎನ್ ಜಿ ಓ ಸ್ಥಾಪನೆ. ಒಳ್ಳೆಯ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು, ಬೈಕ್ ರೈಡಿಂಗ್, ಅಲೆಮಾರಿಯ ಬದುಕು ಇಷ್ಟ. ಕೃತಿ: ಮೈಸೂರ್ ಪಾಕ್ ಹುಡುಗ ...
READ MORE