‘ಸುವರ್ಣ ಕರಾವಳಿ’ ಕೃತಿಯು ನಾಗೇಶ್ ಕುಮಾರ್ ಸಿ.ಎಸ್ ಅವರ ಕಾದಂಬರಿಯಾಗಿದೆ. ಸುವರ್ಣ ಕರಾವಳಿ ಒಂದು ರಹಸ್ಯಮಯ ಪತ್ತೆದಾರಿ ಕಾದಂಬರಿಯಾಗಿದ್ದು, ಇಲ್ಲಿರುವ ಕಥಾನಕವು ತಪ್ಪಿಸಿಕೊಂಡ ನೇವಿ ಕ್ಯಾಪ್ಟನ್, ಕಳೆದು ಹೋದ ಸಬ್ ಮೆರೀನ್, ತೈಲಬಾವಿ ಮಾಲೀಕ ಕಮಾಡೋರ್ ಮನೆ ತುಂಬಾ ಸಂಶಯಾಸ್ಪದ ವ್ಯಕ್ತಿಗಳು, ಹೀಗೆ ಚಿನ್ನದಂತ ತೀರದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ಒಳಗೊಂಡಿದೆ.
ಹವ್ಯಾಸಿ ದ್ವಿಭಾಷಾ ಬರಹಗಾರ ನಾಗೇಶ್ ಕುಮಾರ್ ಸಿ.ಎಸ್. ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಸಿವಿಲ್ ಇಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚೆನ್ನೈ ನಗರದ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬರೆದ ಸಣ್ಣ ಕತೆ, ಕಿರು ಕಾದಂಬರಿಗಳು ತರಂಗ, ತುಷಾರ ಉತ್ಥಾನ, ಸುಧಾ, ಕರ್ಮವೀರ ಸೇರಿದಂತೆ ಹಲವಾರು ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ. ರಕ್ತಚಂದನ, ನಾಳೆಯನ್ನು ಗೆದ್ದವನು ಇವರ ಪ್ರಮುಖ ಕೃತಿಗಳು. ‘ಕರಾಳ ಗರ್ಭ’ ಅವರ ಆಡಿಯೋ ಪುಸ್ತಕ ಇತ್ತೀಚೆಗೆ ಬಿಡುಗಡೆಗೊಂಡಿದ್ದು ಕೇಳುಗರಿಂದ ಮೆಚ್ಚುಗೆ ಪಡೆದಿದೆ. ...
READ MORE