ಲೇಖಕ ಕುಂ. ವೀರಭದ್ರಪ್ಪ ಅವರ ಕಾದಂಬರಿ ಕೃತಿ ʻಸುಪಾರಿʼ. ಪೋಲಿಸ್ ವ್ಯವಸ್ಥೆ, ತನ್ನ ಹತ್ಯೆಗೆ ತಾನೆ ಸುಪಾರಿ ಕೊಟ್ಟುಕೊಳ್ಳುವುದು, ಎನಕೌಂಟರ್ ವಿಷಯದಲ್ಲಿ ಪಿಹೆಚ್‌ಡಿ ಪಡೆದ ಉನ್ನತ ಪೊಲೀಸ್ ಅಧಿಕಾರಿಗಳು, ದಯಾನಿದಿಯ ಅಂತ್ಯ ಮುಂತಾದ ಅನೇಕ ಸುಪಾರಿ ಜಗತ್ತಿನ ಚಿತ್ರಗಳ ಮೂಲಕ ಓದುಗರ ಕುತೂಹಲವನ್ನು ಕತೆಯುದ್ದಕ್ಕೂ ಹಿಡಿದಿಟ್ಟುಕೊಳ್ಳುವ ಕಾದಂಬರಿ. ಇಲ್ಲಿ ಸಾಮಾಜಿಕ ವಾಸ್ತವಗಳನ್ನು ತೆರೆದಿಡುತ್ತಾ ಸುಪಾರಿಯ ಹಲವು ಪದರಗಳನ್ನು, ನಿಗೂಢತೆಯನ್ನು, ಅಪರಾಧ ಜಗತ್ತಿನ ಮುಖಗಳನ್ನು ಲೇಖಕರು ಒಂದೊದಾಗಿಯೇ ಓದುಗರ ಮುಂದೆ ಬಿಚ್ಚಿಡುತ್ತಾ ಹೋಗುತ್ತಾರೆ.
ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು. ಶಿವರಾಜ್ ...
READ MORE