ಸುಂದರ ಸುಮದುರ

Author : ಹೆಚ್.ಜಿ. ರಾಧಾದೇವಿ

Pages 176

₹ 100.00




Year of Publication: 2013
Published by: ಶ್ರೀಲಕ್ಷ್ಮಿವೆಂಕಟೇಶ್ವರ ಪ್ರಕಾಶನ
Address: ನಂ.298, 6ನೇ ಕ್ರಾಸ್ ತ್ರಿವೇಣಿ ರಸ್ತೆ, ಯಶವಂತಪುರ, ಬೆಂಗಳೂರು -560022

Synopsys

ಸುಂದರ ಸುಮಧುರ ಎಂಬ ಈ ಕಾದಂಬರಿ ಉಳಿದ ಇತರ ಕಾದಂಬರಿಗಳಂತೆ ಕೇವಲ ಕಾಲ್ಪನಿಕವಲ್ಲ. ಈ ಕಾದಂಬರಿಯ ಮುಖ್ಯ ಪಾತ್ರ ಮಧುರಾಬಾಯಿ ನಮ್ಮ ಅತ್ತೆಯನ್ನೇ ಕುರಿತು ಬರೆದ ಕಾದಂಬರಿ. ಬಡತನವೋ, ಸಿರಿತನವೋ ಬದುಕನ್ನು ಸುಂದರ ಸುಮಧುರವಾಗಿ ಅನುಭವಿಸಿ ಎಲ್ಲರೊಂದಿಗೆ ಸಹೃದಯಿಯಾಗಿ ವರ್ತಿಸುತ್ತಿದ್ದ ಮಧುರಾಬಾಯಿಯವರು ಇಂದಿಗೂ ಸಹ ಗಂಗಾವತಿಯಲ್ಲಿ ಓಣಿ ಹೆಂಗೆಳೆಯರ ನೆನಪಾಗಿದ್ದಾರೆ ಎನ್ನುತ್ತಾರೆ ಲೇಖಕಿ ಹೆಚ್.ಜಿ. ರಾಧಾದೇವಿ. ಅವರ  ಈ ಕಾದಂಬರಿ ಅವರೇ ಹೇಳಿದಂತೆ ಅವರ ಅತ್ತೆ ಮಧುರಾಬಾಯಿ ಅವರ ಬದುಕಿನ ಕಥೆಯನ್ನಾಧರಿಸಿದ್ದಾಗಿದೆ. 

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books