ಸ್ಥಿತಿ

Author : ಜಿ.ಎಸ್. ಯುಧಿಷ್ಠಿರ

Pages 352

₹ 280.00




Year of Publication: 2012
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ.
Phone: 9141833556

Synopsys

ಸ್ಥಿತಿ-ಜಿ.ಎಸ್.ಯುಧಿಷ್ಠಿರ ಅವರ ಕಾದಂಬರಿ. ಸಂವೇದನೆಗಳ ಸಂಯೋಗವನ್ನು ಸೆರೆ ಹಿಡಿದು ಈ ಕೃತಿಯನ್ನು ರಚಿಸಿರುವ ಯುಧಿಷ್ಠಿರ ಬುದ್ಧಿವಂತಿಕೆಯಲ್ಲಿ ವಿಚಾರಗಳು ಕುಡಿಯೊಡೆದರೆ ಅದಕ್ಕೆ ಜವಾಬ್ದಾರ ನಾನಾ ಎಂದು ಓದುಗರನ್ನೇ ಪ್ರಶ್ನಿಸುತ್ತಾರೆ. ಕೃತಿಯ ಕುರಿತು ಕೌತುಕವಾಗಿ ಬರೆಯುವ ಅವರು ವಿಚಾರವಾದವಾಗಲಿ, ವಿಜ್ಞಾನವಾಗಲಿ ಅಂತಿಮವಲ್ಲ ಎನ್ನುತ್ತಾರೆ. ನಮ್ಮ ಪರಿಸರ ಅದಷ್ಟೂ ಉತ್ತರಿಸಬೇಕಾದ ಪ್ರಶ್ನೆಗಳನ್ನು ಪ್ರಶ್ನಿಸಬೇಕಾದ ಉತ್ತರಗಳನ್ನು ಹುದುಗಿಸಿಕೊಂಡಿರುವ ಅದ್ಭುತವು, ಕಾರ್ಯಕಾರಣಗಳ ಅನಂತ ಸರಪಳಿಯಲ್ಲಿ, ಹುಟ್ಟು ಸಾವುಗಳ ಮಹಾ ಬಂಧನದಲ್ಲಿ, ಕಾಲ ದೇಶಗಳ ಅಕ್ಷಯ ಆವರ್ತದಲ್ಲಿ ನಿರಂತರ ಗತಿಶೀಲನಾಗಿರುವ ಮನುಷ್ಯನೋರ್ವ ತನ್ನ ಸುತ್ತಲಿನ ಅಗಮ್ಯತೆಗೆ, ಅಗೋಚರತೆಗೆ ನಿರರ್ಥಕತೆಗೆ ಸ್ಪಂದಿಸುವ ಪರಿಯೇ ಇಲ್ಲಿ ಸ್ಥಿತಿ ಎನ್ನುವ ಹೆಸರಿನ ಕೃತಿಯಾಗಿ ಮೂಡಿರಬಹುದೆಂದು ನನ್ನ ಸಂಶಯ ಎಂದು ವಿಶ್ಲೇಷಿಸುತ್ತಾರೆ.

ಬದುಕೆಂಬುದು ಕೆಲವರ ವಿವೇಚನೆಗೆ ಪ್ರವೇಶಿಸುವ ಒಂದೊಂದು ತಂತೂ ಕೂಡ ವಿಭಿನ್ನ ಸ್ವರೂಪದ ಕ್ರಾಂತಿಕಾರಿ ಪರ್ವಗಳನ್ನು ಹುಟ್ಟಿ ಹಾಕಿದೆ, ತತ್ವಶಾಸ್ತ್ರದ ಏಳುಸುತ್ತಿನ ಕೋಟೆಯನ್ನೇ ಕಟ್ಟಿ ಬೆಳೆಸಿದೆ. ಯುಗಯುಗಾಂತರಗಳಿಂದಲೂ ಅನುಸರಿಸಿಕೊಂಡು ಬಂದ ಸಾಮುದಾಯಿಕ ಜಾಯಮಾನವನ್ನು ಅಕ್ಷರಶಃ ಬುಡಮೇಲು ಮಾಡಿದೆ. ಪಟ್ಟಭದ್ರರ ಗದ್ದುಗೆಗಳನ್ನು ಗಡಗಡ ಅಲ್ಲಾಡಿಸಿಬಿಟ್ಟಿದೆ. ಅಂಥಹ ದೈತ್ಯ ತಾಕತ್ತಿನ ಬದುಕಿನ ಅಪರಿಮಿತ ಮುಖಗಳೆಡೆಗೆ ನನ್ನ ವಿಸ್ಮತ ನೇತ್ರಗಳು ಸದಾ ತೆರೆದಿರುತ್ತವೆ. ಎಲ್ಲ ಗ್ರಹಿಕೆಗಳೂ ಅಕ್ಷರಗಳ ಮೂಲಕವೇ ವ್ಯಕ್ತವಾಗಬೇಕೆಂದು ನಂಬಿದವನಲ್ಲ ನಾನು. ಅಸಲು ಎಲ್ಲ ಶೋಧನೆಗಳೂ ವ್ಯಕ್ತವಾಗಲೇಬೇಕಾ? ಪ್ರಶ್ನಿಸಿಕೊಳ್ಳುತ್ತಿದ್ದೇನೆ. ವ್ಯಕ್ತಿ ಎನ್ನುವುದು ಇದೆಯೆಂದಾದರೆ ಅವ್ಯಕ್ತವೂ ಇರಲೇಬೇಕಲ್ಲ? 'ಮನುಷ್ಯನ ನಿಶ್ಚಯಕ್ಕೆ ಬೆಲೆಯಿರುವುದು ಸ್ವಾಧೀನ ತಪುವುದರಿಂದಲೇ ಹೊರತಾಗಿ ನಿಶ್ಚಯ ನೀರು ಕುಡಿದಷ್ಟು ಸರಾಗವಾದ್ದರಿಂದಲ್ಲ ಎನ್ನುತ್ತಾರೆ. ಈ ತೀವ್ರಭಾವುಕ ಮುನ್ನುಡಿಯೇ ಕಾದಂಬರಿಯನ್ನು ಓದಿಸಿಕೊಳ್ಳುವ ಸತ್ವದ್ದಾಗಿದೆ ಎನ್ನಬಹುದು. 

Related Books