ಕೊರಟಿ ಶ್ರೀನಿವಾಸರಾವ್ ಅವರ ಐತಿಹಾಸಿಕ ಕಾದಂಬರಿ ‘ಶಕಪುರುಷ’. “ಚಾಲುಕ್ಯ ವಿಕ್ರಮ” ಎಂದೆ ಪ್ರಸಿದ್ಧವಾಗಿರುವ ಮತ್ತು ಚೋಳರ ಪ್ರಸಿದ್ಧ ದೊರೆ ರಾಜೇಂದ್ರ ಚೋಳನನ್ನು ಸೋಲಿಸಿದ ಮಹಾಕಲಿ ಚಾಲುಕ್ಯ ಚಕ್ರವರ್ತಿ ವಿಕ್ರಮಾದಿತ್ಯನ(IV) ಸಂಕ್ಷಿಪ್ತ ಕಥೆಯೇ ಈ ಶಕಪುರುಷ.
ಚಾಲುಕ್ಯ ರಾಜ ಸೋಮೇಶ್ವರನಿಗೂ.. ಚೋಳರಾಜ ರಾಜೇಂದ್ರನಿಗೂ ವೈರತ್ವ ಇರುತ್ತದೆ. ಸೋಮೇಶ್ವರನಿಗೆ ಮೂರು ಮಕ್ಕಳು. ಇಮ್ಮಡಿ ಸೋಮೇಶ್ವರ, ವಿಕ್ರಮಾದಿತ್ಯ, ಜಯಸಿಂಹ. ಇದ್ದ ಮೂವರಲ್ಲಿ ವಿಕ್ರಮಾದಿತ್ಯ ಅಪ್ರತಿಮ ಪರಾಕ್ರಮಿ. ಸೋಮೆಶ್ವರನಿಗೆ ಮೊದಲಿನಿಂದಲೂ ವಿಕ್ರಮಾದಿತ್ಯನೇ ರಾಜನಾಗಬೇಕೆಂಬ ಆಸೆ ಇರುತ್ತದೆ. ಆದರೆ ಧರ್ಮಕ್ಕೆ ಮತ್ತು ವಿಕ್ರಮಾದಿತ್ಯನ ಮಾತುಗಳಿಗೆ ಕಟ್ಟುಬಿದ್ದು ಇಮ್ಮಡಿ ಸೋಮೇಶ್ವರನನ್ನ ಮುಂದಿನ ರಾಜನನ್ನಾಗಿ ಮಾಡಲು ನಿಶ್ಚಯಿಸುತ್ತಾನೆ. ಸೋಮೇಶ್ವರ ಚೋಳರ ಮೇಲಿನ ಯುದ್ಧದ ನಡುವೆ ರೋಗದಿಂದ ನರಳಿ ಸಾಯುತ್ತಾನೆ ಮತ್ತು ಚಾಲುಕ್ಯರು ಆ ಯುದ್ಧವನ್ನ ಸೋಲುತ್ತಾರೆ. ನಂತರ ಇಮ್ಮಡಿ ಸೋಮೇಶ್ವರ ರಾಜನಾಗುತ್ತಾನೆ. ಮುಂದಿನ ಯುದ್ಧದಲ್ಲಿ ಚೋಳರನ್ನು ವಿಕ್ರಮಾದಿತ್ಯನೇ ಸೋಲಿಸುತ್ತಾನೆ. ಆದರೆ ರಾಜನಾಗಿದ್ದ ಇಮ್ಮಡಿ ಸೋಮೇಶ್ವರ, ಉದಯಾದಿತ್ಯ ಎಂಬ ಕುತಂತ್ರಿಯ ಕೈಗೊಂಬೆಯಾಗಿ ವಿಕ್ರಮಾದಿತ್ಯನನ್ನು ಮುಗಿಸಬೇಕೆಂದು ಹೊರಡುತ್ತಾನೆ. ಇದರಿಂದ ವಿಕ್ರಮಾದಿತ್ಯ ಹೇಗೆ ಪಾರಾಗುತ್ತಾನೆ? ಸೋಮೇಶ್ವರ.. ಉದಯಾದಿತ್ಯನನ್ನು ಹೇಗೆ ಸದೆ ಬಡಿದು ಚಕ್ರವರ್ತಿಯಾಗುತ್ತಾನೆ? ಚೋಳರ ಜೊತೆ ಮಾಡಿಕೊಂಡ ಸಂಧಾನವೇನು? ಕದಂಬರ ರಾಜನೊಂದಿಗೆ ಇದ್ದ ಸ್ನೇಹವೆಂತದ್ದು? ತಮ್ಮ ಜಯಸಿಂಹನೊಂದಿಗೆ ನಡೆದ ಕದನ ಮತ್ತು ನಂತರದ ಪರಿಸ್ಥಿತಿಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೃತಿಯಿಂದ ಲಭ್ಯ.
ಶ್ರೀನಿವಾಸರಾವ್ ಅವರು ಕನ್ನಡದ ಪ್ರಸಿದ್ದ ಕಾದಂಬರಿಕಾರರು. ಶ್ರೀಪಾದರಾವ್ ಮತ್ತು ನಾಮಗಿರಿಯಮ್ಮನವರ ಪುತ್ರನಾಗಿ ಹೊಸಕೋಟೆ ತಾಲ್ಲೂಕಿನ ಕೊರಟಿ ಎಂಬ ಗ್ರಾಮದಲ್ಲಿ ಅಕ್ಟೋಬರ್ 19, 1925ರಲ್ಲಿ ಜನಿಸಿದರು. ಹೊಸಕೋಟೆ, ಬೆಂಗಳೂರುಗಳಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಶ್ರೀನಿವಾಸರಾವ್ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಮತ್ತು ಬಿ.ಕಾಂ ಪದವಿಗಳನ್ನು ಪಡೆದು 1957ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದರು. ಹೊಸಕೋಟೆ ಪುರಸಭಾ ಪ್ರೌಢಶಾಲಾ ಶಿಕ್ಷಕರಾಗಿ 1952ರಿಂದ ವೃತ್ತಿ ಆರಂಭ ಮಾಡಿದ ಶ್ರೀನಿವಾಸರಾಯರು, ಗಾಂಧೀನಗರದ ಪ್ರೌಢಶಾಲಾ ಶಿಕ್ಷಕರಾಗಿ, ಭಾರತೀಯ ದೂರವಾಣಿ ಕಾರ್ಖಾನೆ, ಬೆಂಗಳೂರಿನ ಲೆಕ್ಕಪತ್ರ ಕಚೇರಿಗಳಲ್ಲಿ ನೌಕರರಾಗಿ, ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ಆವೃತ್ತಿಯ ಉಪಸಂಪಾದಕರಾಗಿ, ಬೆಂಗಳೂರಿನ ...
READ MORE