ಸತ್ಯಕ್ಕೊಂದು ಸಂತಾಪ

Author : ಕೆ. ಶ್ರೀನಾಥ

Pages 196

₹ 190.00




Year of Publication: 2021
Published by: ಸಾಹಿತ್ಯಲೋಕ ಪಬ್ಲಿಕೇಷನ್ಸ್
Address: #745, 12ನೇ ಮುಖ್ಯರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010
Phone: 9945939436

Synopsys

‘ಸತ್ಯಕ್ಕೊಂದು ಸಂತಾಪ’ ಕೃತಿಯು ಶ್ರೀನಾಥ್ ಅವರ ಕಾದಂಬರಿ. ಕೃತಿಗೆ ಹಿನ್ನುಡಿ ಬರೆದಿರುವ ಜಯಂತ ಕಾಯ್ಕಿಣಿ ಅವರು, `ಅಯಾಚಿತ ಹುಟ್ಟು, ಅಕಲ್ಪಿತ ಸಾವಿನ ನಡುವಿನ, ನೋವು ನಲಿವು, ವಿಕಲ್ಪ ದೈನ್ಯ ಸ್ವಪ್ನ ವಿಭಾವ ಅಭಾವಗಳ ವಿಲಕ್ಷಣ ಜೀವನ ಪ್ರವಾಹದ ಅಲೆಗಳ ಸಂಗ್ರಹದಂತಿರುವ ಈ ವಿಶಿಷ್ಟ ಕಾದಂಬರಿ, ಕೇವಲ 172 ಪುಟಗಳಲ್ಲಿ ನಾಲ್ಕು ತಲೆಮಾರಿನ ಕTನವನ್ನು ಸಾಂದ್ರವಾಗಿ ಚಿತ್ರವತ್ತಾಗಿ ಹೇಳುತ್ತದೆ. ವ್ಯಕ್ತಿಗಳಷ್ಟೇ ಮಹತ್ವದ ಭೂಮಿಕೆಯನ್ನು ಇಲ್ಲಿಯ ಊರುಗಳು, ಬಸ್ ನಿಲ್ದಾಣಗಳು, ಅಡಿಗೆ ಕೋಣೆಗಳು, ಸಮುದ್ರ ತೀರಗಳು, ಆಸ್ಪತ್ರೆಗಳು ನಿರ್ವಹಿಸುತ್ತವೆ. ಒಂದು ನಮೂನೆಯ ವಾಸ್ತವ(surreal)ದ ರೀತಿಯ ಈ ಬರವಣಿಗೆಗೆ, ಸಂಭ್ರಮ ಪಡದ, ರಂಪಮಾಡಿಕೊಳ್ಳದ ವಿಶೇಷ ಗುಣ ಇದೆ. ಹೀಗಾಗಿ ಇದು ಪಾತ್ರ ಪ್ರಸಂಗಗಳನ್ನು ಮೀರಿದ, ಸಾರ್ವತ್ರಿಕ 'ಮನುಕುಲದ ಪಾಡಿ'ನ ದನಿಯಾಗಿ ನಮ್ಮನ್ನು ವಿಚಲಿತಗೊಳಿಸುತ್ತದೆ. ಎಲ್ಲ ಭೌತಿಕ ವಸ್ತುಗಳ ಅರ್ಥಹೀನತೆಯನ್ನು ಮನಗಾಣುತ್ತ ಈ ಕೃತಿ ನಿರಪೇಕ್ಷ ನಿಷ್ಕಾರಣ ನೇಹಕ್ಕಾಗಿ ಹಂಬಲಿಸುತ್ತದೆ ಎಂದಿದ್ದಾರೆ.

About the Author

ಕೆ. ಶ್ರೀನಾಥ

ಲೇಖಕ, ಅನುವಾದಕ ಕೆ. ಶ್ರೀನಾಥ್ ಕೈಗಾರಿಕೋದ್ಯಮಿಯಾಗಿದ್ದವರು, ಸದ್ಯ ವೃತ್ತಿಯಿಂದ ನಿವೃತ್ತರಾಗಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'ನಾಡಿಮಿಡಿತ' ಇವರ ಮೊದಲ ಕಾದಂಬರಿ. ಸಾಹಿತ್ಯಕವಾಗಿ ಮಾತ್ರವಲ್ಲದೇ ಕಲಾವಿದರಾಗಿಯೂ ಗುರುತಿಸಿಕೊಂಡಿರುವ ಶ್ರೀನಾಥ್ ಅವರು ಅನೇಕ ಧಾರಾವಾಹಿ ಹಾಗೂ ಸಿನೆಮಾಗಳಲ್ಲಿಯೂ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಆಕ್ರಮಣ ಇವರು ನಟಿಸಿದ ಮೊದಲ ಚಿತ್ರ. ಶ್ರೀನಾಥ್ ಅವರ ಮೊದಲ ಕೃತಿ ಇಂಗ್ಲೀಷ್ ಕಾದಂಬರಿ Souls od Samaritans. ಈ ಕೃತಿಯನ್ನು ಪೆಂಗ್ವಿನ್ ಅಂಗಸಂಸ್ಥೆಯಾದ ಪಾರ್ಟ್ರಿಡ್ಜ್ ಪ್ರಕಟಿಸಿದೆ. ಅನುವಾದಕರಾಗಿ ಪರ್ಲ್ ಎಸ್, ಬಕ್ ಅವರ ಗುಡ್ ಅರ್ತ್, ಮತ್ತು ಸ್ಪಾನಿಶ್ ನ ಮಾರ್ಕೋಸ್ ...

READ MORE

Related Books