ಖ್ಯಾತ ಕಾದಂಬರಿಗಾರ್ತಿ ಸಾಯಿಸುತೆ ಅವರ ಕಾದಂಬರಿ-ಸಮ್ಮಿಲನ. ವಿದ್ಯಾಭ್ಯಾಸದ ದಿನಗಳಲ್ಲಿನ ಹರೆಯದ ಹೆಣ್ಣು, ಗಂಡುಗಳ ಪ್ರೇಮ ಅತ್ಯಂತ ರೋಚಕ, ರೋಮಾಂಚನಕಾರಿ. ಪ್ರೇಮ ಪ್ರಣಯದ ಲೋಲುಪ್ತಿಯ ಕುಡಿಗಣ್ಣಿನ ನೋಟಕ್ಕೆ ತಹತಹಿಸುವಿಕೆಯಲ್ಲಿನ ಅದ್ಭುತ ಕಾಮನಬಿಲ್ಲು ಅತ್ಯಂತ ಆಕರ್ಷಕ. ಇದು ಬದುಕಿನಲ್ಲಿ ಒಮ್ಮೆ ಮಾತ್ರ ಸಿಗುವಂಥದ್ದು. ಪ್ರೇಮಕಾವ್ಯ ಅತ್ಯಂತ ಸುಂದರ. ಅದು ಸರ್ವವ್ಯಾಪಿ, ಅದಕ್ಕೆ ಮುಪ್ಪಿಲ್ಲ. ಸದಾ ನಳನಳಿಸುವ ಪ್ರಕೃತಿ. ಕೆಲವೊಮ್ಮೆ ಹಿರಿಯರ ಸೇಡು, ಅಂತಸ್ತುಗಳ ಸೌಧದಡಿ ಕುಸಿದು ದುರಂತ ಅಪ್ಪುವ ಅಪಾಯವಿದೆ. ಆದರೆ ‘ಸಮ್ಮಿಲನ’ ಕಾದಂಬರಿಯಲ್ಲಿ ಮುಗ್ಧಪ್ರೇಮವಿದೆ. ಈ ಕಾದಂಬರಿಯು ಚಲನಚಿತ್ರವಾಗಿಯೂ ಪ್ರೇಕ್ಷಕರ ಗಮನ ಸೆಳೆದಿದೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE