ಸಲಾಂ ಬೆಂಗಳೂರು

Author : ಜೋಗಿ (ಗಿರೀಶ್ ರಾವ್ ಹತ್ವಾರ್)

Pages 120

₹ 120.00




Year of Publication: 2018
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 080 - 2661 7100 / 26617755

Synopsys

‘ಸಲಾಂ ಬೆಂಗಳೂರು’ ಜೋಗಿಯವರ ಬೆಂಗಳೂರು ಸರಣಿಯ ನಾಲ್ಕನೇ ಕೃತಿ ಇದು. ಬೆಂಗಳೂರು, ಬಿ ಕ್ಯಾಪಿಟಲ್, ಉಳಿದ ವಿವರಗಳು ಲಭ್ಯವಿಲ್ಲ ಇವಾಗ ಇದು ಸಲಾಂ ಬೆಂಗಳೂರು. ಯಾವುದೂ ಒಂದಕ್ಕೊಂದು ಸಂಬಂಧವಿಲ್ಲದ ಸ್ವತಂತ್ರ ಕೃತಿಗಳು. ಆದರೂ ಎಲ್ಲವೂ ಬೆಂಗಳೂರು ಎನ್ನುವ ಬಿನ್ನಾಣಗಿತ್ತಿಯ ಬಗೆಗೆ ಬರೆಯಲ್ಪಟ್ಟವು.

“ಬೆಂಗಳೂರು” ಕಾದಂಬರಿ ಅಪರಾಧ ಜಗತ್ತಿನ ಇನ್ನೊಂದು ಮಗ್ಗುಲನ್ನು, ಒಂದು ನಗರವನ್ನು ನಿರ್ಲಿಪ್ತವಾಗಿ, ನಕಾರಾತ್ಮಕಾವಾಗಿ ಹೀಗೂ ನೋಡಬಹುದು ಅಥವಾ ಹೀಗೆಯೇ ನೋಡಬೇಕು ಎಂದು ತೋರಿಸಿಕೊಟ್ಟು ಒಂತರಾ ಒಂದು ನಗರದ ದಿನಚರಿಯ ಹಾಗೆ ಸಾಗುವಂತಹ ಕಾದಂಬರಿ. ಅದು ಎಲ್ಲದರ ಬಗ್ಗೆ ತಿರಸ್ಕಾರ, ತಿರಸ್ಕಾರದಿಂದಲೆ ಬದುಕನ್ನು ಪ್ರೀತಿಸುವುದು, ಅನೈತಿಕ ಕಾಮವನ್ನೇ ಸ್ವಚ್ಚಂದತೆಯಿಂದ ಬಯಸುವುದು, ನೈತಿಕ ಶೃಂಗಾರದ ತಿರಸ್ಕಾರ, ಹೀಗೂ ನಡೆದಿರಲಿಕ್ಕೆ ಶಕ್ಯ ಅನ್ನಿಸುವಂತ ಸಂಬಂಧಗಳು, ವಿಕೃತತೆ, ಮನುಷತ್ವ, ಅಧಿಕಾರ ದಾಹ ಇವೆಲ್ಲವನ್ನೂ ಮೆಚ್ಚಿಸಿಕೊಂಡು ಓದಿಕೊಳ್ಳುವಂತೆ ಮಾಡುವ ಕಾದಂಬರಿ ಆಗಿದೆ. 

About the Author

ಜೋಗಿ (ಗಿರೀಶ್ ರಾವ್ ಹತ್ವಾರ್)
(16 November 1965)

ಜೋಗಿ, ಜಾನಕಿ, ಎಚ್‌. ಗಿರೀಶ್‌ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್‌ 16ರಂದು. ಮೂಲತಃ ಸೂರತ್ಕಲ್‌ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಹಾಯ್‌ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...

READ MORE

Related Books