"ಸದ್ಗೃಹಸ್ಥೆ"ಸಾಯಿಸುತೆಯವರ ಮೊದಲ ಕಥಾಸಂಕಲನ. ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾದ ಕಥಾಸರಮಾಲೆಯಿದು.26 ಸಣ್ಣ ಕಥೆಗಳಿಂದ ಕೂಡಿದ ಸದ್ಗೃಹಸ್ಥೆಯ ಬಹುತೇಕ ಎಲ್ಲಾ ಕಥೆಗಳ ಮೂಲ ವಸ್ತು ಹೆಣ್ಣು, ಮತ್ತು ಅವಳ ಭಾವನೆ, ವರ್ತನೆಗಳು.ಸದಾ ಅಗಲ ಕುಂಕುಮವಿಟ್ಟು ನೆರೆಹೊರೆಯವರಿಗೆ,ಸದ್ಗೃಹಸ್ಥೆಯಂತೆ ಕಾಣುವ ಕಮಲಾಳ ನಿಜವಾದ ಬದುಕು ಅನಾವರಣಗೊಂಡಾಗ ಅಚ್ಚರಿಯನಿಸುತ್ತದೆ.ಮುಖವಾಡ ತೊಟ್ಟು ಮರೀಚಿಕೆಯನ್ನು ಬಯಸುವ ಹೆಣ್ಣುಗಳ ಬಗ್ಗೆ ಸಹಾನುಭೂತಿಯಷ್ಟೆ.ಕರ್ತವ್ಯಪ್ರಜ್ಞೆ ಕೈಬೀಸಿ ಕರೆಯುವಾಗ,ಸಂಬಂಧಗಳನ್ನು ಮರೆತು ಮುನ್ನುಗ್ಗಬೇಕು ಎಂಬುವುದು ಅಪರಾಧ ಕಥೆಯ ಸಾರ.ಗಂಡು ಹೆಣ್ಣುಗಳ ನಡುವಿನ ಸೂಷ್ಮಸಂವೇದನೆಯ ಬಗ್ಗೆ ಬಿರುಗಾಳಿ ಕಥೆಯಲ್ಲಿ ಸುಂದರವಾಗಿ ಬಣ್ಣಿಸಲಾಗಿದೆ. ತಮ್ಮ ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿಯೆಂಬಂತೆ, ಇತರರನ್ನು ಕೆಟ್ಟದಾಗಿ ನೋಡುವವರಿಗೆ ಕೋಲ್ಡ್ ಮಿಲ್ಕ್ ಕಥೆ ತಕ್ಕ ಉತ್ತರ ಕೊಡುತ್ತದೆ.ಸ್ವಾಭಿಮಾನ ಕಥೆಯ ಶಾಂತ,ಅದ್ಭುತ ವ್ಯಕ್ತಿತ್ವದ ಕಮಲಾ ಪ್ರತಿ ಹೆಣ್ಣಿಗೆ ಮಾದರಿ.ಹರೆಯದ ಪ್ರೀತಿ, ಮುಪ್ಪಿನವರೆಗೂ ಸವಿನೆನಪಾಗಿ ಕಾಡಿ,ಕಚಗುಳಿಯಿಡುತ್ತದೆ. ಅದಕ್ಕೆ ಜಾತಿ, ಧರ್ಮ, ಭಾಷೆಯ ಸಂಕೋಲೆ ಎಂಬುವುದಿಲ್ಲ ಇದು ಹರೆಯದ ಪ್ರೀತಿ ಕಥೆಯ ಸಾರ.ಮುಗ್ಧೆ ಕಥೆಯ ಜಾನಕಿಯ ಮುಗ್ಧತನವಂತೂ ಹೇಳತೀರದು.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE