ಸಾಹುಕಾರನ ಸೊಸೆ-ಲೇಖಕ ಯಲ್ಲಪ್ಪ ಮುದುಕಪ್ಪ ಹಂಚಿನಾಳ (ಹಂಚಿ) ಅವರ ಕಾದಂಬರಿ. ಕಥಾವಸ್ತು, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ನಿರೂಪಣಾ ಶೈಲಿಯಿಂದಾಗಿ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ಲೇಖಕ ಯಲ್ಲಪ್ಪ ಮುದಕಪ್ಪ ಹಂಚಿನಾಳ (ಹಂಚಿ) ಅವರು ಗದಗ ಜಿಲ್ಲೆಯ ಹುಯಿಲಗೋಳದಲ್ಲಿ 1988 ಜುಲೈ 20ರಂದು ಜನಿಸಿದರು. ತಂದೆ ಮುದಕಪ್ಪ, ತಾಯಿ ಲಕ್ಷಮ್ಮವ್ವ. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವೀಧರರು. ಭಾರತೀಯ ವಾಯು ಸೇನೆಯಲ್ಲಿ ವಾಯುಯೋಧನಾಗಿ 2008ರಲ್ಲಿ ವೃತ್ತಿ ಆರಂಭಿಸಿದ ಅವರು ಪ್ರವೃತ್ತಿಯಿಂದ ಸಾಹಿತ್ಯಾಸಕ್ತರು. ಅವರ ‘ಸಾಹುಕಾರನ ಸೊಸೆ’ ಕಾದಂಬರಿ 2017ರಲ್ಲಿ ಪ್ರಕಟವಾಯಿತು. ಧರ್ಮದ ದಿಗ್ವಿಜಯ (ನಾಟಕ) 2019 ಹಾಗೂ ಅವರ ಇತ್ತೀಚಿನ ಕೃತಿ ‘ಕಥಾ ಹಂದರ' (ನೀಳ್ಗತೆಗಳು). ...
READ MORE