ಹುಲಿಗೇಶ್ ಅವರ ಮೊದಲ ಕಾದಂಬರಿ. ಅಂಕಿಯ ಮುಂದೆ ಲೆಕ್ಕವಿಲ್ಲದಷ್ಟು ಬೀಳುವ ಸೊನ್ನೆಗಳಂತೆ, ಮನಸುಗಳ ಸುತ್ತ ಸುಳಿಯುವ ವಿಚಾರಗಳು ನಮ್ಮ ಅನುಭವ, ತರ್ಕ, ಚಿಂತನೆ, ಮಂಡನೆ. ಕನಸು, ಬಂಧನ. ಹೀಗೆ ಹಲವಾರು ವಿಷಯಗಳ ಕೊಂಡಿಯಲಿ ಉಸಿರಾಡುತ್ತಿರುತ್ತವೆ. ಇಂತಹ ಸನ್ನಿವೇಶಗಳು ಸೃಷ್ಟಿಯಾಗುವುದು ನಾವು ಬೆಳೆದ ಪರಿಸರದಿಂದ ಎಂದು ನೇರವಾಗಿ ಬೆರಳು ಮಾಡಿ ಹೇಳಬಹುದು. ಮನುಷ್ಯನ ವ್ಯಕ್ತಿತ್ವ ಬಿಂಬಿತವಾಗುವುದೇ ಅವನಿರುವ ಪರಿಸರದಿಂದ. ಅಂತಹ ಒಂದು ಪರಿಸರದಲ್ಲೇ ಬೆಳೆದ ಲೇಖಕರು ತಮ್ಮ ಸುತ್ತಲಿನ ಪರಿಸರ, ಮನುಷ್ಯರ ಪ್ರೇರೇಪಣೆಯಿಂದಲೇ ಈ ಕಾದಂಬರಿ ರಚಿಸಿದ್ದಾರೆ. ಈ ಕೃತಿಯಲ್ಲಿ ಮಿನುಗಿರುವ ಪದಗಳು ಸಹಜತೆಯಲ್ಲಿ ಹುಟ್ಟಿ, ನೋವುಗಳ ತುತ್ತನುಂಗಿ, ಬೆಳಕಿನ ಆಶಾಕಿರಣದ ತುಡಿತದಲ್ಲಿ ಹೆಜ್ಜೆ ಹೆಜ್ಜೆಗೂ ಹೋರಾಡುತ್ತ ಗುರಿಯಲ್ಲಿ ಲೀನವಾಗಿವೆ.