ಪುರುಷೋತ್ತಮಾಯಣ-1

Author : ಪುರುಷೋತ್ತಮ ದಾಸ್ ಹೆಗ್ಗಡೆ

Pages 574

₹ 1000.00




Year of Publication: 2023
Published by: ವಂಶಿ ಪಬ್ಲಿಕೇಷನ್ಸ್
Address: #4, ಗಾಯತ್ರಿ ಕಾಂಪ್ಲೆಕ್ಸ್, ಟಿ.ಬಿ ಬಸ್ ಸ್ಟಾಪ್ ಹತ್ತಿರ, ಬಿ.ಎಚ್ ರೋಡ್, ಸುಭಾಸ್ ನಗರ, ನೆಲಮಂಗಲ ಬೆಂಗಳೂರು-562123
Phone: 9916595916

Synopsys

‘ಪುರುಷೋತ್ತಮಾಯಣ-1’ಪುರುಷೋತ್ತಮ ದಾಸ್‌ ಹೆಗ್ಗಡೆ ಅವರ ಕಾದಂಬರಿಯಾಗಿದೆ. ವಾಲ್ಮೀಕಿ ರಾಮಾಯಣವು ಸಂಕೀರ್ಣತೆಯಿಂದ ಕೂಡಿದ್ದು ಕೇವಲ ಒಂದೆರೆಡು ಬಾರಿ ಓದಿದರೆ ಗೂಢಾರ್ಥಗಳು ತಿಳಿಯುವುದಿಲ್ಲ. ವ್ಯಕ್ತಿ-ವ್ಯಕ್ತಿಗಳ, ಘಟನೆ-ಘಟನೆಗಳ ಸಂಬಂಧವನ್ನು ನೇರವಾಗಿ ಕಾಣಲು ಸಾಧ್ಯವಿಲ್ಲ. ಸಾಮಾನ್ಯವಾಗಿ ವ್ಯಕ್ತಿ ಅಥವಾ ಸ್ಥಳವು ಮೊದಲ ಬಾರಿಗೆ ಕಾಣಿಸಿಕೊಂಡಾಗ ಅದರ ಪೂರ್ವಾಪರದ ಬಗ್ಗೆ ಮಾಹಿತಿ ನೀಡುವುದು ವಾಡಿಕೆ. ಆದರೆ, ರಾಮಾಯಣದಲ್ಲಿ ಆ ಸಂಪ್ರದಾಯ ನನಗೆ ಕಾಣಲಿಲ್ಲ. ಯಾವುದೋ ಸ್ವರ್ಗದಲ್ಲಿ ಕಂಡುಬಂದಂತಹ ವ್ಯಕ್ತಿ ಅಥವಾ ಸ್ಥಳದ ಪರಿಚಯವು ಇನ್ಯಾವುದೋ ಸ್ವರ್ಗದಲ್ಲಿ ಕಾಣಸಿಗುತ್ತದೆ. ಈ ಅಂಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಕುತೂಹಲದ ಜೊತೆಗೆ ಗೊಂದಲವೂ ಉಂಟಾಯಿತು. ನಿಧಾನವಾಗಿ ಓದುತ್ತಾ ಟಿಪ್ಪಣಿಗಳನ್ನು ಮಾಡಿಕೊಂಡು ಒಂದಕ್ಕೊಂದು ತಾಳೆ ಮಾಡಿ ನೋಡಿದಾಗ ಅನೇಕ ವಿಷಯಗಳು ಗೋಚರಿಸತೊಡಗಿದವು. ವಿಜ್ಞಾನ ವಿದ್ಯಾರ್ಥಿಯಾದ ನಾನು ರಾಮಾಯಣದಲ್ಲಿನ ಅಲೌಕಿಕತೆಗಳ, ನಿಗೂಢತೆಗಳ ಹಿಂದಿನ ಗೂಢಾರ್ಥಗಳನ್ನು ತಿಳಿದುಕೊಳ್ಳುವತ್ತ ಸಾವಕಾಶವಾಗಿ ಪ್ರಯತ್ನಿಸತೊಡಗಿದೆ.

About the Author

ಪುರುಷೋತ್ತಮ ದಾಸ್ ಹೆಗ್ಗಡೆ

ಪುರುಷೋತ್ತಮ ದಾಸ್ ಹೆಗ್ಗಡೆ ಮೂಲತಃ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದ ಕಲ್ಕುಣಿಕೆಯವರು. ತಂದೆ ಕೆ ಹುಚ್ಚಪ್ಪ ಮತ್ತು ತಾಯಿ ಸುನಂದಮ್ಮ. ಪದವಿ ಪೂರ್ವ ಕಾಲೇಜು ಶಿಕ್ಷಣವನ್ನು ಹುಣಸೂರಿನಲ್ಲಿ ಮುಗಿಸಿ ಮೈಸೂರಿನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದು 1995 ರಲ್ಲಿ ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ನೇಮಕಗೊಂಡು ಪ್ರಸ್ತುತ ಮುಖ್ಯ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಿಕ್ಷಣದಲ್ಲಿ ಅಳವಡಿಸಿಕೊಳ್ಳಬೇಕಾದ ಶಿಕ್ಷಣದ ಮಾಡೆಲ್ ಬಗ್ಗೆ ವಿವರಿಸುವ ‘‘Quadruplet Octagonal Model’’ ಎಂಬ ಆಂಗ್ಲಭಾಷೆಯ ...

READ MORE

Related Books