ಪುಚ್ಚೆ

Author : ಜೋಗಿ (ಗಿರೀಶ್ ರಾವ್ ಹತ್ವಾರ್)

₹ 130.00




Year of Publication: 2020
Published by: ಅಂಕಿತ ಪುಸ್ತಕ
Address: 53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 08026617100

Synopsys

‘ಪುಚ್ಚೆ’ ಲೇಖಕ ಜೋಗಿ ಅವರ ಕಾದಂಬರಿ. ಪುಚ್ಚೆ ಎಂದರೆ ತುಳುವಿನಲ್ಲಿ ಬೆಕ್ಕು ಎಂಬ ಅರ್ಥವಿದೆ.. ಉದ್ದೇಶಪೂರ್ವಕವಾಗಿಯೇ ಪುಚ್ಚೆ ಎಂಬ ಹೆಸರಿಟ್ಟಿದ್ದಾಗಿ ಲೇಖಕರು ಹೇಳುತ್ತಾರೆ. ಈ ಕೃತಿಯು ಜೋಗಿಯವರ ಬೆಂಗಳೂರು ಸರಣಿಯ ಮುಂದುವರೆದ ಭಾಗ. ಇಡೀ ಕಾದಂಬರಿಯ ಕತೆ ಬೆಂಗಳೂರಿನಲ್ಲಿ ನಡೆಯುತ್ತದೆ. ಯುವಕನ ಮೂಲಕ ಸಾಗುವ ಕತೆ, ಅವನ ಬದುಕು, ರಾಜಕಾರಣ ಹಾಗೂ ಮಾಯಾವಾಸ್ತವವನ್ನು ಒಳಗೊಂಡಿದೆ. ಕಥಾ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ. 

About the Author

ಜೋಗಿ (ಗಿರೀಶ್ ರಾವ್ ಹತ್ವಾರ್)
(16 November 1965)

ಜೋಗಿ, ಜಾನಕಿ, ಎಚ್‌. ಗಿರೀಶ್‌ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್‌ 16ರಂದು. ಮೂಲತಃ ಸೂರತ್ಕಲ್‌ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಹಾಯ್‌ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...

READ MORE

Reviews

‘ನಿರಾಕಾರವಾದದ್ದರ ಹುಡುಕಾಟ ಜೋಗಿಯವರ ಪುಚ್ಚೆ’

ಬಾಳಿನ ನಿಗೂಢ ಅನುಭವಗಳ ಅರ್ಥದ ಹುಡುಕಾಟಕ್ಕಾಗಿ ಪತ್ತೇದಾರಿ ಶೈಲಿಯನ್ನು ಯಶಸ್ವಿಯಾಗಿ ಬಳಸಿಕೊಂಡವರಲ್ಲಿ ಯಶವಂತ ಚಿತ್ತಾಲರು ಪ್ರಮುಖರು. ಜೋಗಿ ಕೂಡಾ ಆ ರೀತಿಯಲ್ಲಿ ತಮ್ಮ ಕೆಲವು ಕೃತಿಗಳಲ್ಲಿ ಸಸೆನ್ಸ್ ಎಲಿಮೆಂಟನ್ನು ಬಳಸಿಕೊಂಡವರು, ಅವರ ಪುಚ್ಚೆ ಕಾದಂಬರಿಯಲ್ಲಿ ಆ ರೀತಿಯ ಹುಡುಕಾಟಕ್ಕಾಗಿ ಪತ್ತೇದಾರಿ ಶೈಲಿಯನ್ನು ಬಳಸಿಕೊಂಡಿದ್ದಾರೆ. ಆದರೆ ಈ ರೀತಿಯ ಶೈಲಿಯ ಬಳಕೆ ಕೇವಲ ಕುತೂಹಲ ಕೆರಳಿಸಲಿಕ್ಕಷ್ಟೇ ಅಲ್ಲ. ಇಲ್ಲಿ ಅದು ಆಧ್ಯಾತ್ಮಿಕತೆಯ ಹುಡುಕಾಟ. ಆ ಅಧ್ಯಾತ್ಮಿಕತೆಯು ನಿರಾಕಾರ ಸ್ವರೂಪದ್ದಾಗಿದ್ದು, ಅದು ಮನದೊಳಗಿರುವ, ಆದರೆ ಏನೆಂದು ಸ್ಪಷ್ಟವಾಗದಿರುವ ನಿರಾಕಾರವಾದ ಏನೋ ಒಂದರ ಹುಡುಕಾಟವಾಗಿದೆ. ಅವರ ಅನೇಕ ಕೃತಿಗಳ ನಾಯಕರು ಹೀಗೆ ನಿರಾಕಾರವಾದದ್ದನ್ನು ಹುಡುಕುತ್ತಾ, ಉಪನಿಷತ್ ವಾಕ್ಯದಂತೆ, "ನೇತಿ, ನೇತಿ" ಇದಲ್ಲ. ಇದಲ್ಲ ಎಂದು ನಿರಾಕರಿಸುತ್ತಾ ಹೋಗುವವರೇ ಆಗಿದ್ದಾರೆ. ಈ ಕಾರಣದಿಂದಲೇ ಈ ಕೃತಿಗಳ ನಾಯಕರ ನಡವಳಿಕೆಗಳೂ ವಿಚಿತ್ರವಾಗಿ ಕಾಣಿಸುತ್ತವೆ. ಪುಚ್ಚೆ ಕಾದಂಬರಿಯ ನಾಯಕ ಪುರುಷೋತ್ತಮನೂ ಕಮನ ನಾಯಕನ ರೀತಿಯ ನಿರ್ಭಾವುಕ ಮನೋಸ್ಥಿತಿಯಲ್ಲಿ ಬೆಕ್ಕಿನ ಹೆಜ್ಜೆ ಹಾಕುತ್ತಾ ಹೊಂಚು ಹಾಕುತ್ತಾ ನಿರಾಕಾರವಾದ, ಅಥವಾ ಅಮೂರ್ತವಾದ ಅನುಭವವನ್ನು ಮುಷ್ಟಿಗಾಹ್ಯವಾಗಿಸುವ ಪ್ರಯತ್ನದಲ್ಲಿ ಇರುವುದನ್ನು ಕಾದಂಬರಿಯು ಸಾವಧಾನವಾಗಿ ಚಿತ್ರಿಸುತ್ತದೆ. ಹಾಗೆ ನೋಡಿದರೆ ಈ ಕಾದಂಬರಿಯ ಇತರ ಪಾತ್ರಗಳೂ ಪುರುಷೋತ್ತಮನಂತೆ ಹೊಂಚು ಹಾಕುವ ಕಣ್ಣಾಮುಚ್ಚಾಲೆಯಲ್ಲಿ ನಿರತರೇ, ಕಾದಂಬರಿಯಲ್ಲಿ ನಡೆದ ಒಂದು ಕೊಲೆಯ ಪತ್ತೆಗೆ ಹೊರಟ ಸುರೇಶ, ಪ್ರೇಮದ ಬೆನ್ನು ಬಿದ್ದಿರುವ ಪುರುಇಬ್ಬರೂ ಈ ಹುಡುಕಾಟದಲ್ಲಿ ಕೊನೆಗೆ ಒಂದೇ ಗಮ್ಯವನ್ನು ತಲುಪುವ ಸೋಜಿಗವು ಈ ಕಾದಂಬರಿಯ ಜೀವನಾಡಿಯಾಗಿದೆ. ಒಬ್ಬ ಬೇರೆ ಬೇರೆ ರೀತಿಯ ಪಾತ್ರಗಳನ್ನು ಅಭಿನಯಿಸಲು ಹಾಗೂ ಅದರಲ್ಲೇ ಜೀವಿಸಲು ಇಷ್ಟಪಡುತ್ತಾ, ನಟನೆಯನ್ನೇ ಬದುಕನ್ನಾಗಿಸಿಕೊಂಡವನು ಕೊನೆಗೂ ತನ್ನ ನೈಜ ಪಾತ್ರವನ್ನು ಜೀವಿಸಲು ಹೊರಡುವ ಬದಲಾವಣೆಯ ಮೂಲಕ ಬೆಕ್ಕು ಬುಟ್ಟಿಯಿಂದ ಹೊರಬೀಳುವ ಸಂಗತಿ ಈ ಕಾದಂಬರಿಯ ಜೀವ ಕೇಂದ್ರವಾಗಿದೆ. ರೋಚಕ ಅನುಭವವನ್ನು ನೀಡುವ ಕೃತಿ ಇದು.

(ಕೃಪೆ : ಪುಸ್ತಕ ಲೋಕ,  ಬರಹ : ಸುಬ್ರಾಯ ಚೊಕ್ಕಾಡಿ)

Related Books