ಪೂರ್ಣಿಮಾ ಮಾಳಗಿಮನಿ ಅವರ ಕಾದಂಬರಿ ‘ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೇಕಾಯಿ’. ಕಾಲಡಿಯ ಕಡಲಂಚು ಕುಸಿಯುವಾಗಲೂ ಕೊಡುವ ಕಚಗುಳಿ ಎಂಬ ಉಪಶೀರ್ಷಿಕೆಯನ್ನು ಈ ಕೃತಿ ಹೊಂದಿದೆ. ಹಿರಿಯ ಪತ್ರಕರ್ತ ಹಾಗೂ ಲೇಖಕ ಜೋಗಿ ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ ಒಂದು ಗುಪ್ತ ಪ್ರೇಮ, ಮತ್ತೊಂದು ಭಗ್ನ ಪ್ರೇಮ, ಮುಗಿಯದ ಹುಡುಕಾಟತೀವ್ರ ಹಂಬಲ, ಪ್ರಾಮಾಣಿಕತೆಯ ಬಲೂನು ಒಡೆಯುವ ಕ್ಷಣ, ಅನುಕಂಪದ ಅಕ್ಕರೆ, ಹತ್ತಾರು ವರ್ಷ ಹಿಂದಕ್ಕೆ ಜಿಗಿಯಲೆತ್ನಿಸುವ ರಾಗೋದ್ರೇಕ, ವರ್ತಮಾನದಿಮದ ಪಾರಗಲು ಪ್ರೇಮದ ಮೊರೆ ಹೋಗುವ ಜೀವ - ಹೀಗೆ ಈ ಕಾದಂಬರಿಯಲ್ಲಿ ಏನೆಲ್ಲ ಇದೆ. ಪರಸ್ಪರ ಸಂಬಮಧವಿಲ್ಲದ ಸಂಗತಿಗಳನ್ನು ಪೂರ್ಣಿಮಾ ಅತ್ಯಪೂರ್ವ ವಿನ್ಯಾಸದಲ್ಲಿ ಜೋಡಿಸಿದ್ದಾರೆ.ಇದೊಂದು ಕೊಲಾಜ್ ಮಾದರಿಯ ಕೃತಿ ಎಂಬುದಾಗಿ ಹೇಳಿದ್ದಾರೆ.
ಹಿರಿಯ ಪತ್ರಕರ್ತ ಹಾಗೂ ಲೇಖಕ ಗೋಪಾಲಕೃಷ್ಣ ಕುಂಟಿನಿ ಹೇಳುವಂತೆ ಇದು ಪ್ರೇಮ ಮತ್ತು ಯಾತನೆಯ ಕತೆ. ನೆಲದ ಮುಖದಿಮದ ಎದ್ದು ಬಂದ ಬದುಕುಗಳ ಕತೆ. ಈ ಪುಸ್ತಕ ಬೋಲ್ಡ್ ಮತ್ತು ಬ್ಯೂಟಿಫುಲ್ ಎಂದಿದ್ದಾರೆ.
ಲೇಖಕಿ ಪೂರ್ಣಿಮಾ ಮಾಳಗಿಮನಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹನುಮಂತಪುರದವರು. ಮಂಡ್ಯ ಜಿಲ್ಲೆಯ ನವೋದಯ ವಿದ್ಯಾಲಯದಲ್ಲಿ ಪ್ರೌಢಶಿಕ್ಷಣ ಪೂರೈಸಿ, ಚಿತ್ರದುರ್ಗದ ಎಸ್.ಜೆ.ಎಂ.ಐ.ಟಿ. ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ಪದವೀಧರೆ. 'ಎನಿ ವನ್ ಬಟ್ ದಿ ಸ್ಪೌಸ್' ಎನ್ನುವ ಇಂಗ್ಲೀಷ್ ಕಿರುಗತೆಗಳ (2017) ಸಂಕಲನ ಪ್ರಕಟಿಸಿದ್ದು, ನಾಡಿನ ವಿವಿಧ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇವರ ಹಲವಾರು ತಾಂತ್ರಿಕ ಹಾಗೂ ಸಾಹಿತ್ಯಕ ವಿಷಯ ಕುರಿತ ಲೇಖನಗಳು ಪ್ರಕಟವಾಗಿವೆ. ಪ್ರತಿಷ್ಠಿತ ಭಾರತೀಯ ವಾಯುಸೇನೆಯಲ್ಲಿ ಏರೊನಾಟಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಅಧಿಕಾರಿಯಾಗಿ ಆರು ವರ್ಷ ಸೇವೆ ಸಲ್ಲಿಸಿ, ಪ್ರಸ್ತುತ ಜಂಟಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು: Anyone but the ...
READ MORE