ಪೂರ್ಣೋದಯ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 172

₹ 100.00




Year of Publication: 2011
Published by: ಸುಧಾ ಎಂಟರ್ ಪ್ರೈಸಸ್
Address: #761, 8ನೇ ಮುಖ್ಯ ರಸ್ತೆ, 3ನೇ ಬ್ಲಾಕ್, ಕೊರಮಂಗಲ, ಬೆಂಗಳೂರು-560034

Synopsys

‘ಪೂರ್ಣೋದಯ’ ಕೃತಿಯು ಸಾಯಿಸುತೆ ಅವರ ಸಾಮಾಜಿಕ ಕಾದಂಬರಿಯಾಗಿದೆ. 1992ರಲ್ಲಿ ಈ ಕಾದಂಬರಿಯು ಮಂಗಳ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಗೊಂಡಿತ್ತು. ಕೃತಿಯ ಬೆನ್ನುಡಿಯಲ್ಲಿ ಕೆಲವೊಂದು ವಿಚಾರಗಳು ಹೀಗೆ ಪ್ರಸ್ತಾಪಿತವಾಗಿದೆ. `ಕೆಲವು ಮಹಿಳಾ ಮಣಿಗಳ ಆಧುನಿಕ ಸಭ್ಯತೆ, ಸಾಮಾಜಿಕ ಮೆರಗು ಬರೀ ಕಾಸ್ಮಾಟಿಕ್ ಸಂಸ್ಕಾರವಾಗಿದ್ದು, ಜೀವನವನ್ನು ಪ್ರಾಮಾಣಿಕವಾಗಿ ನಡೆಸಲಾರರು ಹಾಗೂ ಎದುರಿಸಲಾರರು. ಇನ್ನೂ ಅನುಭವಿಸುವುದಂತೂ ಸಾಧ್ಯವೇ ಇಲ್ಲ. ಇಡೀ ಸ್ತ್ರೀ ಕುಲದ ಉದ್ಧಾರದ ವಕ್ತಾರರಂತೆ ತೋರ್ಪಡಿಸಿಕೊಳ್ಳುವ ಇವರ ವೈಯುಕ್ತಿಕ ಜೀವನಕ್ಕೂ, ಆಡುವ ಮಾತಿಗಳಿಗೂ ಆಗಾಧ ವ್ಯತ್ಯಾಸವಿರುತ್ತದೆ. ಎರಡು ಸಮಾನಾಂತರ ರೇಖೆಗಳ ತರಹ, ರೈಲು ಹಳಿಗಳ ತರಹ ಬೇರ್ಪಟ್ಟೇ ಇರುತ್ತೆ. ಅಂಥ ಪುಪ್ಪವತಿಯರು ಎಲ್ಲೆಲ್ಲೂ ಇರುತ್ತಾರೆ. ಹಾಗೆಯೇ , ಸಮಾಜಕ್ಕೆ ಇಂತಹವರು ಅನಿವಾರ್ಯ ಕೂಡ’ ಎಂದು ವಿಶ್ಲೇಷಿಸಲಾಗಿದೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...

READ MORE

Related Books