ಪತಂಗ

Author : ಕಾವ್ಯ ಪುನೀತ್

Pages 102

₹ 120.00




Year of Publication: 2022
Published by: ಕೃಷ್ಣವನ ಪ್ರಕಾಶನ
Address: ಬೆಂಗಳೂರು
Phone: 6361857569

Synopsys

ಹೆಣ್ಣೊಬಳ ಮನಸ್ಸಿನ ಕತೆಯನ್ನು ಹೇಳು ಕೃತಿ ಕಾವ್ಯ ಪುನೀತ್ ವನಗೂರು ಅವರ ‘ಪತಂಗ’ ಕಾದಂಬರಿ. ವರ್ತಮಾನದ ಸಮಾಜಕ್ಕೆ ಹಿಡಿದ ಕೈಗನ್ನಡಿಯಂತೆ ಈ ಕೃತಿಯಿದ್ದು, ಹೆಣ್ಣು ಮಗಳೊಬ್ಬಳು ತನ್ನ ಮನಸ್ಸಿನ ವಿಚಾರವನ್ನು ಇರುವಂತೆ ಹೇಳಿದರೆ, ಕೇಳುವವನ ಕಿವಿ ತೆರೆದು ಇರುವಂತಹ ಪ್ರಸಂಗವನ್ನು ಇಲ್ಲಿ ತೆರೆದಿಡಲಾಗಿದೆ. ಮನಸ್ಸು, ಕನಸ್ಸು, ಭಾವ, ಅನುಭಾವ, ಅನುಭೂತಿ, ಅಭಿಪ್ರಾಯ, ಜೀವನಪ್ರೀತಿ, ಮನೋವಿಜ್ಞಾನ ಹೀಗೆ ಎಲ್ಲ ವಿಚಾರಗಳನ್ನು ಕೂಡ ಈ ಕಾದಂಬರಿಯಲ್ಲಿ ಅಡಕವಾಗಿದೆ. ಕಥಾನಾಯಕಿ ತಪ್ಪು ದಾರಿಯಲ್ಲಿ ಹೋಗುತ್ತಿದ್ದಾಳೆ ಅನ್ನಿಸಿದರೂ - ಅವಳನ್ನು ತಪ್ಪು ಎಂದು ಹೇಳಲಾಗದ ಅವಸ್ಥೆ. ಕಥಾನಾಯಕ ಪ್ರಬುದ್ಧತೆಯೂ ಇಲ್ಲಿ ಪ್ರಮುಖವಾಗಿದೆ. ಒಟ್ಟಾರೆಯಾಗಿ ಸಮಾಜದಲ್ಲಿನ ಕಟ್ಟುಪಾಡು, ವ್ಯವಸ್ಥೆಯನ್ನು ಅಧಿಗಮಿಸಲು ಹೆಣಗುವ ರೀತಿಯನ್ನು ಇಲ್ಲಿ ಲೇಖಕಿ ಕಟ್ಟಿಕೊಟ್ಟಿದ್ದಾರೆ.

About the Author

ಕಾವ್ಯ ಪುನೀತ್
(06 February 1990)

ಲೇಖಕಿ ಕಾವ್ಯ ಪುನೀತ್ ಅವರು ಮೂಲತಃ ಮಲೆನಾಡಿನ ಸಕಲೇಶಪುರ ಜಿಲ್ಲೆಯ ವನಗೂರಿನವರು. ತಾಯಿ ವನಜಾಕ್ಷಿ ಮತ್ತು ತಂದೆ ಲೇ. ಕೃಷ್ಣಸ್ವಾಮಿ. 1990 ಫೆಬ್ರವರಿ 6ರಂದು ಜನನ. ಪ್ರಾಥಮಿಕ ಪ್ರೌಢ ವಿದ್ಯಾಭ್ಯಾಸಗಳು ಸರ್ಕಾರಿ ಶಾಲೆಗಳಲ್ಲಿ ಹಾಗೂ ಬಿ.ಕಾಂ ಪದವಿಯನ್ನ ಬೆಂಗಳೂರಿನ ಕೊಲಂಬೆಸಿಯಾ ಕಾಲೇಜಿನಲ್ಲಿ ಪಡೆದಿರುತ್ತಾರೆ. ಸುಮಾರು 12 ವರ್ಷಗಳಿಂದ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡಿದ ಅನುಭವದ ಜೊತೆಗೆ ಓದು ಮತ್ತು ಬರಹದ ಹವ್ಯಾಸಗಳಿವೆ. ಸತತ ಮೂರು ವರ್ಷಗಳಿಂದ ಮುಖಪುಟ, ಪ್ರತಿಲಿಪಿಯಲ್ಲಿ ಇವರ ಕವಿತೆ, ಲೇಖನಗಳು ಚಾಲ್ತಿಯಲ್ಲಿವೆ. ಕೃತಿಗಳು: ನಿರ್ಧಾರ - ಬದುಕ ಪುಟದಲ್ಲೊಂದು ಭಾವದ ಅಲೆ, ಪತಂಗ, ಇಂತೀ ನಿನಗೆ ...

READ MORE

Related Books