ಲೇಖಕ ಪಿ.ವಿ. ನಾರಾಯಣ ಅವರ ಎಂಟನೆಯ ಕಾದಂಬರಿ ‘ಪರಿಸ್ಥಿತಿ’.. ಇದರಲ್ಲಿ ಗಂಡು ಹೆಣ್ಣಿನ ನಡುವೆ, ಯಾವುದೇ ನಿಯಮಗಳಿಗೆ ಸೊಪ್ಪು ಹಾಕದೆ - ಸಹಜವಾಗಿ ಬೆಳೆಯುವ ಆಕರ್ಷಣೆ, ಅದನ್ನು ಹದ್ದುಬಸ್ತಿನಲ್ಲಿ ಇಡಲು ಉದ್ಭವವಾದ ರೂಢೀಗತ ಸಾಮಾಜಿಕ ನಿಯಮಗಳು ಮತ್ತು ಆ ನಿಯಮಗಳ ವರ್ತುಲದೊಳಗೆ ಬೆಳೆಯುವ ವ್ಯಕ್ತಿ ಸ್ವಾತಂತ್ರ್ಯದ ಅತಿ- ಮಿತಿಯ ಚಿತ್ರಣವಿದೆ. ಅಭಿಮಾನದ ಮುಖವಾಡ ಧರಿಸಿದಾಗ ನಾಗರಿಕ ಸಮಾಜದಲ್ಲಿ ಅಂತರಂಗದ ಬಣ್ಣ ಬಯಲಾಗುವುದಿಲ್ಲ. ಮುಖವಾಡ ಕಳಚುವಷ್ಟರಲ್ಲಿ ಬಣ್ಣಗೇಡಾಗಿರುತ್ತದೆ ಎಂಬ ಸಂದೇಶವನ್ನು ಈ ಕಾದಂಬರಿ ಸಾರುತ್ತದೆ. ಪ್ರ1987ರಲ್ಲಿ ಥಮ ಮುದ್ರಣ ಕಂಡ ಈ ಕಾದಂಬರಿ 2012ರಲ್ಲಿ ದ್ವಿತೀಯ ಮುದ್ರಣ ಕಂಡಿದೆ.
ಡಾ. ಪಿ. ವಿ. ನಾರಾಯಣ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರವಾಚಕರಾಗಿದ್ದರು. ತಂದೆ ಪಿ.ವೆಂಕಪ್ಪಯ್ಯ, ತಾಯಿ ನರಸಮ್ಮ. ಬೆಂಗಳೂರಿನಲ್ಲಿ 1942ರ ಡಿ.18 ರಂದು ಹುಟ್ಟಿದರು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), “ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ.. ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ ಮೊದಲಾದ 16ಕೃತಿಗಳು. ಸಂಪಾದಿತ-ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ ಮೊದಲಾದ 5 ಕೃತಿಗಳು. ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ ಮುಂತಾದ 12 ಕೃತಿಗಳು. ಕಾದಂಬರಿಗಳು-ಸಾಮಾನ್ಯ, ...
READ MORE