ಓ ನನ್ನ ಚೇತನ

Author : ಪದ್ಮಾ ಗುರುರಾಜ್‌ (ಎಚ್.ಆರ್‌. ಪದ್ಮಾವತಿ)

₹ 128.00




Published by: ಎಸ್. ಎಲ್. ಎನ್. ಪಬ್ಲಿಷಿಂಗ್ ಹೌಸ್

Synopsys

ಕಾದಂಬರಿಗಾರ್ತಿ ಪದ್ಮಾ ಗುರುರಾಜ್ ಅವರ ವಿಭಿನ್ನ ಸಾಮಾಜಿಕ ಕಾದಂಬರಿ ‘ ಓ ನನ್ನ ಚೇತನ’. ಸ್ನಾತಕೋತ್ತರ ಪದವಿ ಓದುವ ಕಿಶೋರಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿ. ಕೆಸರಿನ ಕಮಲದಂತೆ ರೂಪವಂತೆ. ಆದರೆ ಎಲ್ಲ ಹೆಣ್ಣುಮಕ್ಕಳಿಗೂ ತವರು, ಹೆತ್ತವರು ಬೆನ್ನಿಗೆ ಆಸರೆಯಾಗಿ ನಿಂತರೆ ಕಿಶೋರಿ ಮಾತ್ರ ನಿಜಕ್ಕೂ "ಕೆಸರಿ"ನಲ್ಲಿ ನಿಂತ ಕಮಲವೇ... ಹೆತ್ತವರ ಪ್ರೀತಿ ಆರೈಕೆಯಿಲ್ಲದೆ ಸದಾಕಾಲ ತಟವಟ ಮಾಡುವ ಅಪ್ಪ-ಅಮ್ಮ, ಕಾಡುವ ಬಡತನ, ಓದು ಹತ್ತದ ತಂಗಿಯರು, ತಮ್ಮ ...ಕಿಶೋರಿ ತನ್ನ ಆಸೆಗಳನ್ನೆಲ್ಲಾ ಕಟ್ಟಿಡುವಂತ ಪರಿಸ್ಥಿತಿ...ಎಲ್ಲ ಘಟ್ಟಗಳಲ್ಲಿಯೂ ರ್ಯಾಂಕ್, ಚಿನ್ನದ ಪದಕ ಗಳಿಸಿದ್ದ ಕಿಶೋರಿಗೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಮತ್ತೆ ಪಿಎಚ್ಡಿ ಮಾಡುವ ಕನಸುಗಳು... ತದನಂತರದಲ್ಲಿ ಕೆಲಸ ಹಿಡಿದು ಎಲ್ಲರನ್ನೂ ನೋಡಿಕೊಳ್ಳುವ ಕನಸು... ತಂದೆತಾಯಿಗೆ ಇದೇ ಭರವಸೆಯಿತ್ತು, ಅಂತು ಇಂತು ಸ್ಕಾಲರ್‌ಶಿಪ್ ಪಡೆದು, ಸ್ನಾತಕೋತ್ತರ ಪದವಿಗೆ ಮೈಸೂರಿನ ಮಾನಸಗಂಗೋತ್ರಿ ಸೇರುತ್ತಾಳೆ... ಹೀಗೆ ಹೆಣೆದುಕೊಂಡು ಹೋಗುವ ಈ ಕಾದಂಬರಿಯು ಧೈರ್ಯಂ ಸರ್ವತ್ರ ಸಾಧನಂ... ಶಿಕ್ಷಣ ಎಲ್ಲರಿಗೂ ಅಗತ್ಯದ ಆಸ್ತಿ... ಎನ್ನುವುದನ್ನು ಬಿಚ್ಚಿಡುತ್ತದೆ..

About the Author

ಪದ್ಮಾ ಗುರುರಾಜ್‌ (ಎಚ್.ಆರ್‌. ಪದ್ಮಾವತಿ)
(12 May 1942)

ಕಾದಂಬರಿಕಾರ್ತಿ ಪದ್ಮಾ ಗುರುರಾಜ್‌ರವರು ಹುಟ್ಟಿದ್ದು 1942 ರ ಸೆಪ್ಟಂಬರ್ 12 ರಂದು ಕೋಲಾರದ ಬಾಗೇಪಲ್ಲಿಯಲ್ಲಿ. ಕಾಲೇಜು ಪತ್ರಿಕೆಗಳಿಗೆ ಆಗಾಗ್ಗೆ ಬರೆದ ಸಣ್ಣಕತೆ, ಕವನಗಳು ಪ್ರಕಟಗೊಂಡಾಗ ಅವರ ಮನಸ್ಸು ಪುಳಕಗೊಂಡು ಬರೆಯಬೇಕೆಂಬ ಹಠ ಹುಟ್ಟಿತು. ಓದು ಮುಗಿಯುವ ಮುನ್ನವೇ ದಾಂಪತ್ಯ ಜೀವನಕ್ಕೆ ಅಡಿಯಿಟ್ಟು ತುಂಬಿದ ಮನೆಯ ಅವಿಭಕ್ತ ಕುಟುಂಬದಲ್ಲಿ ಪತಿಯೊಡನೆ ಏಕಾಂತದಲ್ಲಿ ಮಾತನಾಡಲೂ ಅವಕಾಶ ಸಿಗದಂತಹ ಪರಿಸ್ಥಿತಿಯಲ್ಲಿ ಇವರ ನೋವು, ನಲಿಗಳು, ತುಮಲಗಳಿಗೆ ಸಾಂತ್ವನ ಮಾಡುವವರೂ ಇಲ್ಲದ ಪರಿಸ್ಥಿತಿಯಲ್ಲಿ, ಕಾಲೇಜು ದಿನಗಳಲ್ಲಿ ಮನಸ್ಸಿನಾಳದಲ್ಲಿ ಬೆಚ್ಚಗೆ ಕುಳಿತಿದ್ದ ಸಾಹಿತ್ಯ ಚಟುವಟಿಕೆಗಳಿಗೆ ಕಾವು ಕೊಟ್ಟಂತಾಗಿ ಸಣ್ಣಕಥೆ, ಹರಟೆ, ಲೇಖನ ರೂಪದಲ್ಲಿ ಹೊರಹೊಮ್ಮತೊಡಗಿದವು. ...

READ MORE

Related Books