ಒಂಟಿ ಒಬ್ಬಂಟಿ

Author : ಬೋಲ ಚಿತ್ತರಂಜನ್ ದಾಸ್ ಶೆಟ್ಟಿ

Pages 179

₹ 100.00




Published by: ನಾಗಶಕ್ತಿ ಪ್ರಕಾಶನ
Address: ಮಂಗಳೂರು

Synopsys

‘ಒಂಟಿ ಒಬ್ಬಂಟಿ’ ಕೃತಿಯು ಬೋಲ ಚಿತ್ತರಂಜನ್ ದಾಸ್ ಶೆಟ್ಟಿ ಅವರ ಕಾದಂಬರಿಯಾಗಿದೆ. ಈ ಕೃತಿಯಲ್ಲಿಯ ಕೆಲವೊಂದು ವಿಚಾರಗಳು ಹೀಗಿವೆ : ಗಂಡು ವೇಷಧಾರಿಗಳೆಲ್ಲ ಗಂಡಸರಲ್ಲ, ಸೀರೆ ಉಟ್ಟವರೆಲ್ಲ ಹೆಂಗಸರಲ್ಲ, ನಪುಂಸಕರಲ್ಲಿ ಹತ್ತು ಹಲವು ವಿಧದ ನಪುಂಸಕರಿದ್ದಾರೆ ಎನ್ನುವ ಲೇಖಕರು ಮನುಷ್ಯರು ಎಂಬ ಮಾನವ ಕುಲದ ಬದುಕನ್ನು `ಒಬ್ಬ ಒಬ್ಬಂಟಿ‘ ಕಾದಂಬರಿಯನ್ನಾಗಿಸಿದ್ದಾರೆ. ನಪುಂಸಕರು, ಜೋಗಿ ಜೋಗತಿಯರ ಬದುಕಿನ ಸುತ್ತಸಾಗುವ `ಒಂಟಿ ಒಬ್ಬಂಟಿ‘, ಕಾದಂಬರಿ ಎಂದರೆ ಕಾದಂಬರಿಯೇ ಅಲ್ಲ. ಸಂಶೋಧನಾ ಗ್ರಂಥ ಎಂದರೂ ಸರಿಯೇ. ಆದರೆ, ಅದನ್ನು ಲೇಖಕರು ಅಲ್ಲಗಳೆಯುತ್ತಾರೆ. ಜನಪದ ಕಥೆ ಆಧಾರವಾಗಿದ್ದರೂ ಕಥಾವಸ್ತು ಮಾತ್ರ ಸಮಕಾಲೀನ. ಬೈಲಹೊಂಗಲ, ಸವದತ್ತಿಗಳಲ್ಲಿಯ ಜೋಗ, ಜೋಗತಿಯರ ನಂಬಿಕೆ, ಆಚರಣೆಗಳ ಪ್ರತೀಕ ಈ ಕಾದಂಬರಿ ಎಂದೇ ಅನಿಸುತ್ತದೆ.

About the Author

ಬೋಲ ಚಿತ್ತರಂಜನ್ ದಾಸ್ ಶೆಟ್ಟಿ
(30 August 1944 - 07 August 2016)

ಬೋಲ ಚಿತ್ತರಂಜನ್ ದಾಸ್ ಶೆಟ್ಟಿ ಅವರು ಮೂಲತಃ ದಕ್ಷಿಣ ಕನ್ನಡದವರು.ತುಳು ಮತ್ತು ಕನ್ನಡ ಲೇಖಕರು. 2010 ರಲ್ಲಿ ನಡೆದ 16ನೇ ಮಂಗಳೂರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 2016 ಆಗಸ್ಟ್ 7 ರಂದು ಮರಣ ಹೊಂದಿದರು.  ಕೃತಿಗಳು : ಪೊನ್ನು ಮಣ್ಣುದ ಬೊಂಬೆ (ತುಳು ನಾಟಕ), ಅಳಿದುಳಿದರು (ಕಾದಂಬರಿ), ಕುಡಿ (ಕಾದಂಬರಿ), ನೀರ್ (ತುಳು ನಾಟಕ), ಬಿನ್ನೆದಿ ( ತುಳು ಪ್ರಕಾರ), ಬಿನ್ನೆದಿ (ತುಳು ಪಾಡ್ದಾನ), ಅಮರ ಬೀರೇರ ಮಾಮನ್ನೆ( ಪಾಡ್ದನ), ಒಂಟಿ ಒಬ್ಬಂಟಿ (ಕಾದಂಬರಿ), ತಮ್ಮಲೆ ಅರುವಟ್ಟ ಕಟ್ಟ್ ( ಪ್ರಬಂಧ), ಶ್ರೀ ಮಧ್ವ ಭಾರತ ...

READ MORE

Related Books