‘ಒಂದಾದ ಮನಗಳು’ ತಾಜುದ್ದೀನ್ ದಳಪತಿ ಅವರ ಕಾದಂಬರಿಯಾಗಿದೆ. ಈ ಕಾದಂಬರಿ ಓದುತ್ತಾ ಸಾಗಿದಂತೆ ನಮ್ಮ ನಡುವೆ ನಡೆದಿರುವ ಘಟನೆಗಳು ಕಣ್ಣೆದುರಿಗೆ ಬರುತ್ತವೆ. ಜನಜೀವನದಲ್ಲಿ ಉಂಟಾದ ಘಟನೆಗಳನ್ನೇ ಅವರು ತಮ್ಮ ಕಾದಂಬರಿ ಬರೆಹಕ್ಕೆ ಮಾಧ್ಯಮವನ್ನಾಗಿಸಿಕೊಳ್ಳುವಲ್ಲಿ ಹೊಸತನ ಕಂಡುಕೊಂಡಿದ್ದಾರೆ. ಕಾದಂಬರಿಯಲ್ಲಿ ನವಿರಾದ ನಿರೂಪಣೆಯೊಂದಿಗೆ ಅಂತರ್ಗತವಾದ ಒಂದು ಅರ್ಥವಿನ್ಯಾಸವನ್ನು ಸಾಧಿಸಲು ಪ್ರಯತ್ನಿಸಿದ್ದಾರೆ ಎಂದು ಭಾಸವಾಗುತ್ತದೆ. ಕಾದಂಬರಿಯ ಪ್ರತಿ ಹಂತದಲ್ಲೂ ಮುಂದೇನಾಯಿತು? ಎಂಬ ಸಹಜವಾದ ಕುತೂಹಲವನ್ನು ಓದುಗರಲ್ಲಿ ಮೂಡಿಸುವ ಮಟ್ಟದಲ್ಲಿ ನಿಲ್ಲುತ್ತದೆ. ಕಾದಂಬರಿ, ಅಂತಿಮವಾಗಿ ಒಡೆದು ಹೋದ ಮನಸ್ಸುಗಳನ್ನು ಒಂದಾಗಿಸುವುದರೊಂದಿಗೆ ಸುಖಾಂತ್ಯವಾಗುತ್ತದೆ.
ತಾಜುದ್ದೀನ್ ದಳಪತಿ ಮೂಲತಃ ಕೊಪ್ಪಳದ ಕುಷ್ಟಗಿಯವರು. ಮೂಲತಃ ಹೋರಾಟದ ಹಿನ್ನೆಲೆಯಲ್ಲಿ ಗುರುತಿಸಿಕೊಂಡಿರುವ ಇವರು ಹಲವಾರು ಸಾಕ್ಷರತಾ ಕಾರ್ಯಕ್ರಮಗಳನ್ನು ಮಾಡಿರುತ್ತಾರೆ. ಅನಕ್ಷರತೆ ವಿರುದ್ಧ ತಂಡ ಕಟ್ಟಿಕೊಂಡು ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿದ ಇವರಿಗೆ ಮುಖ್ಯಮಂತ್ರಿಗಳ ಮತ್ತು ಜಿಲ್ಲಾಧಿಕಾರಿಯಿಂದ ಮೆಚ್ಚುಗೆಗಳು ದೊರಕಿವೆ. ಕೃತಿಗಳು: ಒಂದಾದ ಮನಗಳು ಪ್ರಶಸ್ತಿಗಳು: ರಾಷ್ಟ್ರೀಯ ವಿಭೂಷಣ ಪ್ರಶಸ್ತಿ, ಕಲ್ಯಾಣ ಕರ್ನಾಟಕ ರಾಜ್ಯ ರತ್ನ ಪ್ರಶಸ್ತಿ, 2023ನೇ ಸಾಲಿನ ಗವಿಸಿದ್ದೇಶ್ವರ ಪ್ರಶಸ್ತಿ ಪುರಸ್ಕಾರ, ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ...
READ MORE