ಬಿ.ಆರ್. ಚಂದ್ರಶೇಖರ ಬೇದೂರು ಅವರ ಕಾದಂಬರಿ-ಓ ಹಿಮಾಲಯ. ಕಥಾನಾಯಕ ಹಿಮಾಲಯದಲ್ಲಿ ಪ್ರಯಾಣ ಮಾಡುವಾಗ ಆಕಸ್ಮಿಕವಾಗಿ ಆತ ಬೇರೊಂದು ಲೋಕಕ್ಕೇ ಹೊಗುತ್ತಾನೆ. ಆಕಾಶ ಮಾರ್ಗದಲ್ಲಿ ಸಂಚರಿಸುವ ಸಂನ್ಯಾಸಿಗಳನ್ನು, ಆಮ್ಲಜನಕವಿಲ್ಲದ ಹಿಮಾಲಯದ ತುತ್ತತುದಿಯಲ್ಲಿ ತಾವಿರುವಷ್ಟು ಜಾಗದಲ್ಲಿ ಆಮ್ಲಜನಕ ಉತ್ಪತ್ತಿ ಮಾಡಿಕೊಳ್ಳುವ ಯೋಗಿಗಳನ್ನು ಭೇಟಿಯಾಗುವ ಕಥಾ ಹಂದರವನ್ನು ಈ ಕಾದಂಬರಿಯಲ್ಲಿ ಕಾಣಬಹುದು. ಕಥಾನಾಯಕನನ್ನು ಲೇಖಕರು ಹಿಮಾಲಯ ಪಯಣದಲ್ಲಿ ದಾರಿತಪ್ಪಿ ಚೀನಾ ಗಡಿಯೊಳಗೂ ಪ್ರವೇಶಿಸುವಂತೆ ಮಾಡಿ ಚೀನಾ-ಭಾರತ ಗಡಿ ಸಮಸ್ಯೆಯ ಕುರಿತು ಬೆಳಕು ಚೆಲ್ಲಿದ್ದಾರೆ.
ಲೇಖಕ ಬಿ. ಆರ್. ಚಂದ್ರಶೇಖರ ಬೇದೂರು ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೇದೂರು ಗ್ರಾಮದವರು. ಕಾನೂನು ಪದವೀಧರರು. ಸ್ನಾತಕೋತ್ತರ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. 16ನೇ ವಯಸ್ಸಿನಲ್ಲೇ ಛಿದ್ರ ಎಂಬ ಕಾದಂಬರಿ ರಚಿಸಿದ್ದರು. 6 ಕನ್ನಡ ಕಾದಂಬರಿ ಹಾಗೂ ‘A Brilliant shadow’ ಎಂಬ ಇಂಗ್ಲಿಷ್ ಕಾದಂಬರಿ ರಚಿಸಿದ್ದಾರೆ. ವಾಸ್ತವಿಕ ಜಗತ್ತಿನ ಆಗು ಹೋಗುಗಳ ವಿಷಯ ಎತ್ತಿಕೊಂಡು ಆಧ್ಯಾತ್ಮದ ಹಿನ್ನೆಲೆಯಲ್ಲಿ ನೋಡುವುದು ಅವರ ಕಾದಂಬರಿಗಳ ವೈಶಿಷ್ಟ್ಯ. ‘ಯಮಮಾರ್ಗದಲ್ಲಿ ವೈತರಣೀ ನದಿ’, ‘ನೈಮಿಷಾರಣ್ಯ’, ‘ಅಜ್ಞಾತ’ ಅವರ ಪ್ರಮುಖ ಕಾದಂಬರಿಗಳು. ...
READ MORE