ಹೆಣ್ಣಿನ ಅಂತರಾಳದ ಪಿಸುಮಾತುಗಳು ಗಂಡಿಗೆ ಎಷ್ಟು ಗೊತ್ತಿರುತ್ತದೆ? ಎಂಬ ಪ್ರಶ್ನೆ ಒಂದು ಕಡೆ. ಹೊಟ್ಟೆ ಹೊರೆಯಲು ಒಂದು ಹುದ್ದೆ ಹಿಡಿದು ಉನ್ನತ ಸ್ಥಾನಕ್ಕೆ ಮೇಲೇರುವಾಗ ಮಹಿಳೆಯನ್ನು ಹತ್ತಿಕ್ಕಲು ನೋಡುವ ಪುರುಷ ಸಮಾಜಕ್ಕೆ ಇಲ್ಲಿಯ ಕತಾನಾಯಕಿ ದಿಟ್ಟತನದಿಂದ ಗೆದ್ದು ಬದುಕುವ ಕಥಾ ಹೂರಣ ಓದುಗರನ್ನು ರೋಚಕತೆಯ ಅಂಚಿಗೆ ಕರೆದೊಯ್ಯುತ್ತದೆ. “ಈ ಪ್ರಪಂಚದಲ್ಲಿ ಸುಖವಾದ ಸಂಸಾರಕ್ಕಿಂತ ಆನಂದಕರವಾದದ್ದು ಮತ್ತೇನೂ ಇಲ್ಲ. ಯಾರೇ ಆದರೂ ಪ್ರಯತ್ನಿಸಬೇಕಾಗಿರುವುದು ಇದಕ್ಕಾಗಿಯೇ” - ಇಂತಹ ಸೂಕ್ತಿಗಳು ಕಾದಂಬರಿಯ ಸೊಗಸನ್ನು ಮತ್ತಷ್ಟು ಹೆಚ್ಚಿಸುತ್ತವೆ. ಲೇಖಕ ರುದ್ರಸಪ್ನ ಮತ್ತು ಈರಣ್ಣ ಜಿ. ಅವರು ಈ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE