ಎಂ.ಕೆ.ಇಂದಿರಾ ಅವರು ಪತ್ತೇದಾರಿ ಕಾದಂಬರಿಯ ಶೈಲಿಯಲ್ಲಿ ಬರೆದ ಕಥೆ `ನೂರೊಂದು ಬಾಗಿಲು’. ಮಲೆನಾಡಿನ ಕೊಪ್ಪದ ಬಳಿಯಿರುವ 'ನೂರೊಂದು ಬಾಗಿಲು' ಎಂಬ ಹಳ್ಳಿಯಲ್ಲಿ ನೂರೊಂದು ಬಾಗಿಲುಗಳಿರುವ ಮೂರು ಉಪ್ಪರಿಗೆಯ ದೊಡ್ಡ ಮನೆ ನಾಗೇಶರಾಯರದ್ದು. ಅವರು ಆಗರ್ಭ ಶ್ರೀಮಂತರ ಏಕಮಾತ್ರ ಪುತ್ರ. ಪತ್ನಿ ರುಕ್ಮಿಣಮ್ಮ, ಮಗ ಮಂಜುನಾಥ ಮತ್ತು ಮಗಳು ವರದಾ ಇಷ್ಟೇ ಅವರ ಕುಟುಂಬದ ಸದಸ್ಯರು. ಆದರೆ ಇನ್ನೂರೈವತ್ತು ವರ್ಷಕ್ಕೂ ಮೊದಲು ಹಿರಿಯರು ಕಟ್ಟಿಸಿದ ಆ ಮನೆಯಲ್ಲಿ ಬಂಧುತ್ವ ಹೇಳಿಕೊಂಡು ಬಂದು ಹೋಗುವವರೇ ಹೆಚ್ಚು.ಹೀಗೆ ಕಥೆಯು ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತದೆ. 1986 ಪ್ರಥಮ ಮುದ್ರಣ ಕಂಡ ಈ ಕೃತಿಯು 2008ರಲ್ಲಿ 2ನೇ ಮುದ್ರಣ ಕಂಡಿದೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು 05-01-1917 ರಂದು. ಊರು ಮಲೆನಾಡಿನ ತೀರ್ಥಹಳ್ಳಿ. ತಂದೆ ತರೀಕೆರೆ ಸೂರ್ಯನಾರಾಯಣ, ತಾಯಿ ಬನಶಂಕರಮ್ಮ. ಇಂದಿರಾ ಓದಿದ್ದು, ಕನ್ನಡ ಮಾಧ್ಯಮಿಕ ಶಾಲೆಯ 2ನೇಯ ತರಗತಿವರೆಗೆ ಮಾತ್ರ. ತಮ್ಮ 12 ವರ್ಷಕ್ಕೆ ಮದುವೆಯಾಯಿತು. ಅವರು ಬರೆಯಲು ಆರಂಭಿಸಿದ್ದು 1963ರಲ್ಲಿ. ತುಂಗಭದ್ರ ಅವರ ಮೊದಲ ಕೃತಿ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು.ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ"."ತುಂಗಭದ್ರೆ"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ...
READ MORE