ಮಧ್ಯಮ ವರ್ಗದ ಮಹಿಳೆಯರ ಜೀವನವನ್ನು ಹೋಲುವ ಕಾದಂಬರಿ ಕಾವ್ಯ ಪುನೀತ್ ವನಗೂರು ಅವರ ‘ನಿರ್ಧಾರ- ಬದುಕ ಪುಟದಲ್ಲೊಂದು ಭಾವದ ಅಲೆ’. ಸಮಾಜದ ಸುತ್ತಮುತ್ತಲಿನ ಕಥಾಹಂದರವನ್ನಿಟ್ಟುಕೊಂಡು ರಚಿತಗೊಂಡಿರುವ ಈ ಕಾದಂಬರಿಯು, ಭಾವನೆಗಳ ಅಲೆಯಲ್ಲಿ ವಿಹರಿಸುತ್ತದೆ. ಮಧ್ಯಮ ವರ್ಗದ ಮಹಿಳೆಯರಿಗೆ ತನ್ನ ಕತೆಯನ್ನೇ ಓದುತ್ತೇನೆ ಎನ್ನುವಷ್ಟು ಆತ್ಮೀಯವಾಗಿ ‘ನಿರ್ಧಾರ’ ಕಾದಂಬರಿ ರಚಿತವಾಗಿದೆ. ಕನ್ನಡ ವ್ಯಾಕರಣ ಹಾಗೂ ನಿರೂಪಣೆಯ ಶೈಲಿ ಭಿನ್ನವಾಗಿ ಮೂಡಿಬಂದಿದ್ದು, ಇಲ್ಲಿನ ಬರಹಗಳು ಓದುಗರಿಗೆ ಸರಾಗವಾಗಿ ಓದಿಸಿಕೊಂಡು ಹೋಗಲು ಅನುಕೂಲವಾಗಿದೆ.
ಲೇಖಕಿ ಕಾವ್ಯ ಪುನೀತ್ ಅವರು ಮೂಲತಃ ಮಲೆನಾಡಿನ ಸಕಲೇಶಪುರ ಜಿಲ್ಲೆಯ ವನಗೂರಿನವರು. ತಾಯಿ ವನಜಾಕ್ಷಿ ಮತ್ತು ತಂದೆ ಲೇ. ಕೃಷ್ಣಸ್ವಾಮಿ. 1990 ಫೆಬ್ರವರಿ 6ರಂದು ಜನನ. ಪ್ರಾಥಮಿಕ ಪ್ರೌಢ ವಿದ್ಯಾಭ್ಯಾಸಗಳು ಸರ್ಕಾರಿ ಶಾಲೆಗಳಲ್ಲಿ ಹಾಗೂ ಬಿ.ಕಾಂ ಪದವಿಯನ್ನ ಬೆಂಗಳೂರಿನ ಕೊಲಂಬೆಸಿಯಾ ಕಾಲೇಜಿನಲ್ಲಿ ಪಡೆದಿರುತ್ತಾರೆ. ಸುಮಾರು 12 ವರ್ಷಗಳಿಂದ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡಿದ ಅನುಭವದ ಜೊತೆಗೆ ಓದು ಮತ್ತು ಬರಹದ ಹವ್ಯಾಸಗಳಿವೆ. ಸತತ ಮೂರು ವರ್ಷಗಳಿಂದ ಮುಖಪುಟ, ಪ್ರತಿಲಿಪಿಯಲ್ಲಿ ಇವರ ಕವಿತೆ, ಲೇಖನಗಳು ಚಾಲ್ತಿಯಲ್ಲಿವೆ. ಕೃತಿಗಳು: ನಿರ್ಧಾರ - ಬದುಕ ಪುಟದಲ್ಲೊಂದು ಭಾವದ ಅಲೆ, ಪತಂಗ, ಇಂತೀ ನಿನಗೆ ...
READ MORE