ಕಾದಂಬರಿಕಾರ್ತಿ ಚಿತ್ರಲೇಖ ಅವರ ಸಾಮಾಜಿಕ ಖಾದಂಬರಿ ‘ನೀನಿಲ್ಲದ ನಾನು’. ಮಾನವನಾಗಿ ಹುಟ್ಟಿದ ಪ್ರತಿಯೊಬ್ಬರ ಬಾಳಿನಲ್ಲೂ ಒಂದು ಲಕ್ಷ್ಮಣ ರೇಖೆ ಇರುತ್ತದೆ. ಅದನ್ನು ದಾಟಿದಾಗ ಅನಾಹುತ ತಪ್ಪಿದ್ದಲ್ಲ. ಈ ರೇಖೆಯನ್ನು ದಾಟಿ ಸಮಾಜದಲ್ಲಿ ಜೀವಿಸಲು ಎದೆಗಾರಿಕೆ ಬೇಕು. ಇಂತಹ ರೇಖೆಗಳು ಹೆಣ್ಣುಮಕ್ಕಳಿಗೆ ಕೊಂಚ ಜಾಸ್ತಿಯೇ ಎನ್ನಬಹುದು. ಇಂತಹ ಎದೆಗಾರಿಕೆಯನ್ನು ಹೊಂದಿದವಳೇ ಕಾದಂಬರಿಯ ಕಥಾ ನಾಯಕಿ ಹಿಮ. ಇದರ ಪರಿಣಾಮವೇ ಕಾದಂಬರಿಯ ಕೊನೆಯ ಪುಟದಲ್ಲಿ ಅವಳು ಬರೆದಿಟ್ಟ ಡೈರಿ.
ಹಿಮ, ಸುಮಾ ಅಕ್ಕತಂಗಿಯರು. ತಂದೆ ಇಲ್ಲದೆ ತಾಯಿಯ ಪ್ರೀತಿಯ ಮಡಿಲಲ್ಲಿ ಆಡಿ ಬೆಳೆದವರು. ವಿದ್ಯಾಭ್ಯಾಸದಲ್ಲಿ ಬಹಳ ಬುದ್ಧಿವಂತರು. ಹಿಮ ತನ್ನ ವಿದ್ಯೆ ಮುಗಿಸಿ ಸ್ವೀಟ್ ಹೋಂ ಎಂಬ ಕಂಪನಿಯಲ್ಲಿ ಮಾಲೀಕನ ಸೆಕ್ರೆಟರಿಯಾಗಿ ಕೆಲಸಕ್ಕೆ ಸೇರುತ್ತಾಳೆ. ಆ ಕಂಪನಿಯಲ್ಲಿ ಯಾವುದೂ ಸ್ವಚ್ಛತೆ ಇಲ್ಲದೇ, ಅಶಿಸ್ತಿನ ಕಂಪನಿಯಾಗಿದ್ದು ಅಸ್ತವ್ಯಸ್ತವಾಗಿರುವ ಕಛೇರಿಗಳನ್ನು ನೋಡಿ ಮಾಲೀಕ ಸಹ್ಯಾದ್ರಿಯ ಒಪ್ಪಿಗೆ ಪಡೆದು ಕೆಲಸದ ಆಳಿನ ಜೊತೆ, ಮಾಲೀಕನ ಕೊಠಡಿಯನ್ನೂ ಸೇರಿಸಿ ಸ್ವಚ್ಛಗೊಳಿಸಿ ಇಂದ್ರ ಲೋಕದಂತೆ ಮಾರ್ಪಾಡು ಮಾಡುತ್ತಾಳೆ. ಅವಳಿಗೆ ಈ ಕೆಲಸವೇಂದರೆ ಎಲ್ಲಿಲ್ಲದ ಪ್ರೀತಿ, ವಿಶ್ವಾಸ ತನ್ನ ಸ್ವಂತ ಕಂಪನಿಯೆನ್ನುವಷ್ಟು ಒಲುಮೆಯ ಅಭಿಮಾನವು ತುಂಬಿ ಕೊಂಡಿದ್ದಾಳೆ. ಹಿಮಾಳಿಗೆ ಮದುವೆ ಮಾಡಬೇಕೆಂದು ಅವಳ ತಾಯಿಯ ಆಸೆ. ಆದರೆ ಮದುವೆಯೆಂದರೆ ಇಷ್ಟವಿಲ್ಲದ ಅವಳನ್ನು ಒತ್ತಾಯ ಪಡಿಸತೊಡಗಿದರು. ಅವಳಿಗೂ ಒಪ್ಪಲೇಬೇಕಾದ ಪ್ರಸಂಗವು ಒದಗುತ್ತದೆ. ನಿಶಾಂತ್ ಎಂಬ ಹುಡುಗನನ್ನು ಗೊತ್ತು ಮಾಡಿದರು ಅವಳ ತಾಯಿ. ಹಿಮಾಳ ಸೌಂದರ್ಯವನ್ನು ಕಂಡ ನಿಶಾಂತ್ ಮನ ಸೋತಿರುತ್ತಾನೆ. ಎರಡು ಮನೆಯವರೂ ಒಪ್ಪಿ ಮದುವೆ ನಿಶ್ಚಯ ಮಾಡುತ್ತಾರೆ. ಗಂಡಿನ ತಂದೆತಾಯಿಗಳು ಮದುವೆಯ ನಂತರ ಹಿಮ ಕೆಲಸಕ್ಕೆ ಹೋಗುವುದು ಬೇಡ ಎಂಬ ಕಂಡೀಶನ್ ಹಾಕಿರುತ್ತಾರೆ. ಆದರೆ ಹಿಮಾಗೆ ಕೆಲಸ ಬಿಡುವುದು ಇಷ್ಟವಿರುವುದಿಲ್ಲ. ಯಾರಲ್ಲೂ ಹೇಳಿಕೊಳ್ಳುವ ಹಾಗಿಲ್ಲ. ನಿಶಾಂತ್ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದಾಗ, 3 ತಿಂಗಳು ರಜೆ ಹಾಕು ಆಮೇಲೆ ನನ್ನ ತಂದೆತಾಯಿಯರನ್ನು ಒಪ್ಪಿಸೋಣ ಎಂದು ಸಮಾಧಾನ ಮಾಡಿರುತ್ತಾನೆ. ಅದರಂತೆ ಅವಳು ಕೂಡ ನಡೆದುಕೊಂಡಿರುತ್ತಾಳೆ. ಮದುವೆಯ ದಿನಗಳು ಹತ್ತಿರವಾಗಿ ಎಲ್ಲರಿಗೂ ಪತ್ರಿಕೆಗಳನ್ನು ಹಂಚಲು ಶುರುಮಾಡುತ್ತಾರೆ. ಹಿಮ ಮೊದಲ ಪತ್ರಿಕೆಯನ್ನು ಕಂಪನಿಯ ಮಾಲಿಕ ಸಹ್ಯಾದ್ರಿಗೆ ಕೊಡಲು ಹೋದಾಗ ಅವರು ದೇವದಾಸನಂತಾಗಿರುತ್ತಾನೆ. 3 ತಿಂಗಳಿಂದ ಹಿಮ ರಜದ ಮೇಲಿರುವುದರಿಂದ ಅವನಿಗೆ ಕೆಲಸ ಮಾಡಲು ಇಷ್ಟವಿರುವುದಿಲ್ಲ. ಆಫೀಸಿಗೆ ಹೋಗದೆ ಮನೆಯಲ್ಲಿ ಹಿಮಾಳ ಸ್ನೇಹ, ಕೆಲಸದ ಬಗ್ಗೆ ಅವಳ ಶ್ರದ್ಧೆಯನ್ನು ನೆನೆಸಿಕೊಂಡು ದೇವದಾಸನಂತಾಗಿರುತ್ತಾನೆ. ಹೀಗೆ ಕಾದಂಬರಿ ಸಾಗುತ್ತದೆ..
ಸಾಹಿತಿ, ಕಾದಂಬರಿಗಾರ್ತಿ ಚಿತ್ರಲೇಖಾ ಎಸ್ ಅವರು 1945 ಮೇ 01 ಜನಿಸಿದರು. ಇವರ ಬಹುತೇಕ ಕಾದಂಬರಿಗಳು ಸಿನಿಮಾಗಳಾಗಿವೆ. ‘ಮುದುಡಿದ ತಾವರೆ ಅರಳಿತು, ಸಮಯದ ಗೊಂಬೆ’ ಕನ್ನಡದಲ್ಲಿ ಚಲನಚಿತ್ರವಾಗಿದೆ. ‘ಪ್ರೇಮಪಲ್ಲವಿ, ಸ್ವರ್ಗದ ನೆರಳು, ಕೆಂಪಾದ ದೀಪ, ಹೂಮಂಚ, 47 ದಿನಗಳು 1987, ಕರುಣಹತ್ಯೆ, ನಂಜಾದ ನೆನಪು, ಸಂಗಮಿಸದ ನದಿಗಳು’ ಅವರ ಪ್ರಮುಖ ಕಾದಂಬರಿಗಳು. ...
READ MORE