ಕುಂ. ವೀರಭದ್ರಪ್ಪ ಅವರ ಹದಿನೆಂಟನೆಯ ಕಾದಂಬರಿ ’ನಿಜಲಿಂಗ’. ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಆರಂಭವಾಗುವ ಕಾದಂಬರಿ ವಿವಿಧ ಆಯಾಮಗಳಲ್ಲಿ ಚಲಿಸುತ್ತದೆ. ಸ್ವಾತಂತ್ರ್ಯ ಹೋರಾಟ, ಬ್ರಿಟಿಷರ ಆಡಳಿತದ ಅವಧಿಲ್ಲಿ ಭಾರತೀಯ ಮನಸುಗಳ ತಲ್ಲಣ, ಚಾಣಾಕ್ಷ ಚೋರರು, ನಂಬಿಕೆಗಳು... ಹೀಗೆ ವಿವಿಧ ಘಟನೆಗಳು ಕಾದಂಬರಿಯಲ್ಲಿ ಹಾದು ಹೋಗುತ್ತವೆ.
ಈ ಕಾದಂಬರಿಯು ಎಂದಿನಂತೆ ಅನೇಕ ಅಚ್ಚರಿಯ ಮಜಲುಗಳನ್ನು ಒಳಗೊಂಡಿದೆ. ಕಾದಂಬರಿಯ ನಾಯಕ ನಿಜಲಿಂಗ. ಬ್ರಿಟಿಷ್ ಅಧಿಕಾರಿಯಾಗಿದ್ದ ಸಿದ್ಧಲಿಂಗ ಮತ್ತು ಸತ್ಯ (ಪೌಲಿನ್) ಅವರ ಮಗನಾದ ನಿಜಲಿಂಗ ಪರಿಸ್ಥಿತಿಯ ಅಲೆಗೆ ಸಿಲುಕಿ ನಾನಾ ದಾರಿಯಲ್ಲಿ ಪಯಣಿಸುತ್ತಾನೆ. ಕಳ್ಳರ ಗುಂಪಿನಲ್ಲಿ ಸೇರಿಕೊಳ್ಳುವುದರಿಂದ ನಿಜಲಿಂಗನ ವ್ಯಕ್ತಿತ್ವದಲ್ಲಿ ಬದಲಾವಣೆಗಳಾಗುತ್ತವೆ. ಅವರ ಯಾವ್ಯಾವ ದಾರಿಯಲ್ಲಿ ಸಾಗುತ್ತಾನೆ ಎನ್ನುವುದೇ ಈ ಕಾದಂಬರಿ ಕಥಾವಸ್ತು.
ಕುಂ.ವೀ ಅವರ ಕತೆಯ ವಸ್ತು-ಪಾತ್ರಗಳು ಸಾಮಾನ್ಯವಾಗಿ ಬಳ್ಳಾರಿ ಸುತ್ತಮುತ್ತಲಿನ ಪರಿಸರದವುಗಳು. ಇದೇ ಮೊದಲ ಬಾರಿಗೆ ಕುಂ.ವೀ. ಅವರು ಹಾಸನ, ಅರಸೀಕೆರೆ ಮತ್ತು ಸಕಲೇಶಪುರ ಪ್ರದೇಶದ ಪಾತ್ರಗಳಿಗೆ ’ಅವಕಾಶ’ ನೀಡಿದ್ದಾರೆ. ವಾಸ್ತವಿಕ, ಕಾಲ್ಪನಿಕ ಮತ್ತು ಐತಿಹಾಸಿಕ ರೂಪದಲ್ಲಿದೆ. ಓ.ಎಲ್. ನಾಗಭೂಷಣ ಸ್ವಾಮಿ ಅವರು ಮುನ್ನುಡಿ ಹಾಗೂ ವಿಮರ್ಶಕ ಸಿ. ಎನ್. ರಾಮಚಂದ್ರನ್ ಅವರು ಬೆನ್ನುಡಿ ಬರೆದಿದ್ದಾರೆ.
ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು. ಶಿವರಾಜ್ ...
READ MORE