ನೆರಳಿನಾಚೆಯ ಬೆಳಗು

Author : ಎಚ್‌. ತಿಪ್ಪೇರುದ್ರಸ್ವಾಮಿ

Pages 350

₹ 160.00




Year of Publication: 2017
Published by: ಡಿ.ವಿ.ಕೆ. ಮೂರ್ತಿ
Address: ಕೃಷ್ಣಮೂರ್ತಿಪುರಂ, ಮೈಸೂರು-570004

Synopsys

ವಚನಕಾರ ಸೊನ್ನಲಿಗೆಯ ಸಿದ್ಧರಾಮ ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಪ್ರಮುಖನಾದವ. ತನ್ನ ಕ್ರಿಯಾಶೀಲ ಕತೃತ್ವಶಕ್ತಿಯಿಂದ ಕೆರೆ ಕಟ್ಟಿದ ಸಿದ್ಧರಾಮ ಕಲ್ಯಾಣದಲ್ಲಿ ಅಲ್ಲಮ, ಬಸವರೊಡನಿದ್ದು ಅದ್ಭುತ ವಚನ ಸೃಷ್ಟಿಗೆ ಕಾರಣನಾದ. ಸಿದ್ಧರಾಮನ ಬದುಕನ್ನು ಕೇಂದ್ರವಾಗಿಟ್ಟುಕೊಂಡು ರಚಿತವಾದ ಕಾದಂಬರಿಯಿದು.

ಕಾದಂಬರಿಕಾರ ತಿಪ್ಪೇರುದ್ರಸ್ವಾಮಿ ಅವರು ಕಾದಂಬರಿ ರಚನೆಗೆ ಸಂಬಂಧಿಸಿದಂತೆ ಹೀಗೆ ಬರೆದಿದ್ದಾರೆ- ಕೆರೆಯ ನಿರ್ಮಾಣ ಸುತ್ತ ಸಿದ್ದರಾಮನ ಕಾದ್ಯಕ್ಷೇತ್ರ ಬೆಳೆದು, ಕಿರುವಳ್ಳಿಯಾದ ಸೊನ್ನಲಿಗೆ, ಸೊನ್ನಲಾಪುರವಾದದ್ದು ಇದರ ಕೇಂದ್ರಬಿಂದು. ಈಗ ಸೊಲ್ಲಾಪುರವಾಗಿರುವ ಆ ಕ್ಷೇತ್ರವನ್ನು ಮೊದಲೇ ನೋಡಿದ್ದರೂ ಈ ಕಾದಂಬರಿಯ ರಚನೆಯ ಸಂದರ್ಭದಲ್ಲಿ ಮತ್ತೆ ಕೆಲವು ದಿನಗಳನ್ನು ಅಲ್ಲಿ ಕಳೆದಿದ್ದೇನೆ. ಸಿದ್ದರಾಮನ ಹಳೆಯ ಮನೆಯೆಂದು ಹೇಳಲಾಗುವ ಸ್ಮಾರಕ, ಗುರುಭೇಟಿಯ ಸ್ಥಳ, ನವಣೇಶ್ವರಲಿಂಗ, ಈಗ ಶಿಥಿಲವಾಗಿರುವ ಮಲ್ಲಿಕಾರ್ಜುನ ದೇವಾಲಯ, ಹೋಮಕುಂಡ, ಕೆರೆಯ ನಡುಗಡ್ಡೆಯಲ್ಲಿರುವ ಸಮಾಧಿ-ಇಲ್ಲೆಲ್ಲಾ ಕುಳಿತು ಸೊನ್ನಲಿಗೆಯ ರೂಪವನ್ನೂ, ಕೆರೆಯ ನಿರ್ಮಾಣ ಮತ್ತು ಅದರ ಸುತ್ತ ಊರು ಬೆಳೆದುಬಂದ ಬಗೆಯನ್ನೂ ಚಿತ್ರಿಸಿಕೊಂಡಿದ್ದೇನೆ. ಆ ಚಿತ್ರವನ್ನು ಕಂಡುಕೊಳ್ಳಬಹುದಾದಂತಹ ಪರಿಸರ ಈಗಲೂ ಅಲ್ಲಿದೆ. ಅದನ್ನು ಕಾದಂಬರಿಯಲ್ಲಿ ಮೂಡಿಸಲು ಪ್ರಯತ್ನಿಸಿದ್ದೇನೆ.

About the Author

ಎಚ್‌. ತಿಪ್ಪೇರುದ್ರಸ್ವಾಮಿ
(03 February 1928 - 28 October 1994)

ಶರಣರನ್ನು ಕುರಿತು ಕಾದಂಬರಿ ರಚಿಸುವ ಮೂಲಕ ಜನಪ್ರಿಯರಾಗಿರುವ ಎಚ್. ತಿಪ್ಪೇರುದ್ರಸ್ವಾಮಿ ಅವರು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿದವರು. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯವರಾದ ತಿಪ್ಪೇರುದ್ರಸ್ವಾಮಿ ಜನಿಸಿದ್ದು 1928ರ ಫೆಬ್ರುವರಿ 3ರಂದು. ತಂದೆ ಚೆನ್ನಮಲ್ಲಯ್ಯ, ತಾಯಿ ಬಸಮ್ಮ. ಹೊನ್ನಾಳಿ, ಶಿರಾಳಕೊಪ್ಪ ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಆರಂಭಿಕ ಶಿಕ್ಷಣ ಪಡೆದ ತಿಪ್ಪೇರುದ್ರಸ್ವಾಮಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ (ಎಂ.ಎ.) ಪಡೆದರು. ಶರಣರ ಅನುಭಾವ ಪ್ರಪಂಚ ಮಹಾಪ್ರಬಂಧಕ್ಕೆ ಡಾಕ್ಟೊರೇಟ್‌ ಪದವಿ (1962) ಪಡೆದರು. ಹಾಸನದ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ತಿಪ್ಪೇರುದ್ರಸ್ವಾಮಿ ...

READ MORE

Related Books