ಗೊಂದಲದಲ್ಲಿ ದಿನದೂಡುವ ವಿದ್ಯಾರ್ಥಿ ಜೀವನದ ಬಗ್ಗೆ ಈ ಕಾದಂಬರಿಯೂ ವಿವರಿಸುತ್ತದೆ. ಸಂಘರ್ಷ ಮತ್ತು ಹಲವು ಸಮಸ್ಯೆಗಳ , ಗೊಂದಲದಿಂದ ಕಳೆಯುವ ವಿದ್ಯಾರ್ಥಿ ಜೀವನ, ಉದ್ದೀಪನ ಮತ್ತು ಆಲಂಬನ ನಡುವಿನ ರಹಸ್ಯವನ್ನು ತಿಳಿಯಪಡಿಸುವ ಒಂದು ದಾರಿಯಾಗಿ ಮುಂದುವರೆಯುತ್ತದೆ. ಗಂಭೀರತೆ ಮತ್ತು ಸಂಕೀರ್ಣತೆಯ ಸಂವೇದನೆಗಳನ್ನು ಸೂಕ್ಷವಾಗಿ , ಯಾವುದೇ ಅಡೆತಡೆಗಳಿಲ್ಲದೆ ಪ್ರಕಟಿಸಿರುವ ಸೂಕ್ಷ ಉಪಕರಣವೇ “ನಾಲ್ಕನೆಯ ಆಯಾಮ” ಎಂಬ ಈ ಕೃತಿ. ಈ ಕಾದಂಬರಿಯನ್ನು ಅತ್ಯಂತ ಸೂಕ್ಷವಾಗಿ ಕೇಳಿದರೆ, ಗಮನಿಸಿದರೆ ಪಾರ್ಶ್ವದಿಂದ ಅಲೌಕಿಕ ಸಂಗೀತ ಕೇಳಿ ಬರುತ್ತದೆ. ಅಷ್ಟರ ಮಟ್ಟಿಗೆ ಈ ಕೃತಿಯೂ ಮಹತ್ವವನ್ನು ಹೊಂದಿದೆ.
ಕನ್ನಡದ ವಿಶಿಷ್ಟ ಕಾದಂಬರಿಕಾರ ಕುಸುಮಾಕರ ದೇವರಗೆಣ್ಣೂರ ಅವರ ಮೂಲ ಹೆಸರು ವಸಂತ ಅನಂತ ದಿವಾಣಜಿ. ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ವಸಂತ ಅನಂತ ದಿವಾಣಜಿ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ದೇವರಗೆಣ್ಣೂರ ಗ್ರಾಮದಲ್ಲಿ ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ, ಪುಣೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು. 1956ರಲ್ಲಿ ಸೊಲ್ಲಾಪುರದ ದಯಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ 35 ವರ್ಷಗಳವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು. ಕನ್ನಡದ ಕವಿ ದಾ.ರಾ.ಬೇಂದ್ರೆ ಅವರ ನಿಕಟ ಸಂಪರ್ಕ ವಸಂತ ದಿವಾಣಜಿ ಅವರಿಗೆ ಸುಮಾರು 12 ವರ್ಷಗಳ ಕಾಲ ಸೊಲ್ಲಾಪುರದಲ್ಲಿ ಸಿಕ್ಕಿತ್ತು. ಸೊಲ್ಲಾಪುರಕ್ಕೆ ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ-1966