ನಕ್ಷತ್ರ ಲೋಕದಲ್ಲಿ ನಚಿಕೇತ

Author : ಕಿರಣ್ ಪ್ರಸಾದ್ ರಾಜನಹಳ್ಳಿ

Pages 48

₹ 25.00




Year of Publication: 2011
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 08022161900

Synopsys

'ನಕ್ಷತ್ರ ಲೋಕದಲ್ಲಿ ನಚಿಕೇತ' ವೈಜ್ಞಾನಿಕ ಕಾಲ್ಪನಿಕ ಕಿರು ಕಾದಂಬರಿ. ನಚಿಕೇತ ಎಂಬ ಪುಟ್ಟ ಹುಡುಗ ಆಕಸ್ಮಿಕವಾಗಿ ‘ರೇನಾ‘ ಎಂಬ ನಕ್ಷತ್ರ ಲೋಕ ತಲುಪಿ ಅಲ್ಲಿಯ ಲೋಹ ಮಾನವರು, ಅವರ ಅರ್ಥವಾಗದ ಭಾಷೆ, ವಿಚಿತ್ರ ವೇಷ-ಭೂಷಣ ಕಂಡು ಬೆರಗುಗೊಳ್ಳುತ್ತಾನೆ.

ಲೇಖಕಿ ಬೇರೊಂದು ಗ್ರಹದ ಪರಿಸರವನ್ನು ಗ್ರಹಿಸಿ ಬರೆದಿರುವ ರೀತಿ ಅನನ್ಯ. ಒಬ್ಬ ತಿಂದರೆ ಉಳಿದವರಿಗೆ ಹಸಿವಾಗದಿರುವುದು, ದಿನವೊಂದಕ್ಕೆ ವಯಸ್ಸು ಎರಡು ವರ್ಷದಂತೆ ಹೆಚ್ಚಾಗುತ್ತಾ ಹೋಗುವುದು, ಅಲ್ಲಿನ ಜನ 600 ವರ್ಷಗಳಷ್ಟು ಕಾಲ ಬದುಕುವ ರೀತಿ ಆಶ್ಚರ್ಯ- ಮನೋರಂಜನೆ ನೀಡುತ್ತದೆ.

About the Author

ಕಿರಣ್ ಪ್ರಸಾದ್ ರಾಜನಹಳ್ಳಿ
(20 June 1966)

ಕಾದಂಬರಿಗಾರ್ತಿ ಕಿರಣ್ ಪ್ರಸಾದ್ ರಾಜನಹಳ್ಳಿ ಅವರು 1966 ಜೂನ್‌ 20 ರಂದು ಚಿತ್ರದುರ್ಗದಲ್ಲಿ ಜನಿಸಿದರು. ’ನೀ ನಡೆವ ಹಾದಿಯಲ್ಲಿ’ (ಕಾದಂಬರಿ), ಮಕ್ಕಳ ಕಥಾಲೋಕ, ನಕ್ಷತ್ರಲೋಕದಲ್ಲಿ ನಚಿಕೇತ (ಶಿಶುಸಾಹಿತ್ಯ), ಹಿಮಕಿನ್ನರಿ, ಸರಿಸೃಪಗಳ ಜೀವನಚರಿತ್ರೆ, ಸೂರ್ಯ ಅಪಾರ್ಟ್‌ಮೆಂಟ್ (ಮಕ್ಕಳ ಪತ್ತೆದಾರಿ ಕಾದಂಬರಿ), ಅಮೆರಿಕಾದಲ್ಲಿ ಅಧ್ಯಯನದ ಅನುಭವ (ಪ್ರವಾಸಕಥನ), ಶಿಶುಪ್ರಾಸಗಳು, ಒಂಟಿ ನಕ್ಷತ್ರದ ನಾಡಿನಲ್ಲಿ, ಅಮ್ಮ ಏಕೆ ನಗಲಿಲ್ಲ (ಲೇಖನ ಸಂಗ್ರಹ). ಲೇಖಕರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ, ದೆಹಲಿಯ ನ್ಯಾಷನಲ್ ಬುಕ್ ಟ್ರಸ್ಟ್ ಪ್ರಶಸ್ತಿಗಳು ಲಭಿಸಿವೆ. ...

READ MORE

Related Books