ಡಾ. ಬಿ. ಪ್ರಭಾಕರ ಶಿಶಿಲ ಅವರ ಐತಿಹಾಸಿಕ ಕಾದಂಬರಿ-ನದಿ ಎರಡರ ನಡುವೆ. ಈ ಕಾದಂಬರಿಯು ಕೊಡಗಿನ ಹಾಲೇರಿ ರಾಜವಂಶೀಯರ ನೈಜ ಚಿತ್ರಣವನ್ನು ಆಧರಿಸಿದ ಕಥೆಯ ವಸ್ತುವನ್ನು ಒಳಗೊಂಡಿದೆ. ಕಥೆಯ ನಿರೂಪಣಾ ಶೈಲಿ, ಪಾತ್ರಗಳಿಗೆ ನ್ಯಾಯಸಮ್ಮತ ಗೌರವ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನವನ್ನು ಸೆಳೆಯುತ್ತದೆ.
ಲೇಖಕ ಡಾ. ಪ್ರಭಾಕರ ಶಿಶಿಲ ಅವರು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಸಾಹಿತ್ಯದತ್ತ ಹೆಚ್ಚಿನ ಆಸಕ್ತಿ ಹೊಂದಿರುವ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಅರ್ಥಶಾಸ್ತ್ರದ ಪಠ್ಯಪುಸ್ತಕಗಳನ್ನು ರಚಿಸಿದ್ದಾರೆ. ಕೃತಿಗಳು: ಮತ್ಸ್ಯಗಂಧಿ, ಗಗ್ಗರ, ಬಾರಣೆ, ಗುಜರಿ ಅದ್ದಿಲಿಚ್ಚನ ಜಿಹಾದಿಯ, ಕೊಡಗಿನ ಐತಿಹ್ಯ ಕಥೆಗಳು, ಬೆಟ್ಟದಾ ಮೇಲೊಂದು, ಕಪಿಲಳ್ಳಿಯ ಕತೆಗಳು, ಜಲಲ ಜಲಧಾರೆ, ದೊಡ್ಡ ವೀರ ರಾಜೇಂದ್ರ, ಕೊಡಗಿನ ಕತೆಗಳು. ಶಿಶಿಲರನ್ನೇ ಕುರಿತು ಅನೇಕ ಗ್ರಂಥಗಳು ಪ್ರಕಟವಾಗಿವೆ . ಸುವರ್ಣ ಅಭಿನಂದನಾ ಸ್ಮರಣಿಕೆ, ಸಾಹಿತ್ಯ ಶಿಶಿಲ: ಶಿಶಿಲರ ಸಮಗ್ರ ಸಾಹಿತ್ಯ ವಿಮರ್ಶೆ, ಶಿಶಿಲರ ಜೀವನ ಮತ್ತು ಸಾಧನೆಗಳು, ಪ್ರಭಾಕರ ಶಿಶಿಲರ ಸಾಹಿತ್ಯ ಕುರಿತು ಡಾ. ಮೋಹನ ಕುಮಾರ ...
READ MORE