ನಾಟ್ಯಮಯೂರಿ

Author : ಸಾ.ಶಿ. ಮರುಳಯ್ಯ

Pages 77

₹ 52.00




Year of Publication: 2015
Published by: ಸಪ್ನ ಬುಕ್ ಹೌಸ್
Address: ಆರ್.ಓ. #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

ಖ್ಯಾತ ಸಾಹಿತಿ ಡಾ. ಸಾ.ಶಿ. ಮರುಳಯ್ಯ ಅವರು ಬರೆದ ಕೃತಿ-ನಾಟ್ಯಮಯೂರಿ. ಚೋಳರು ಹಾಗೂ ಹೊಯ್ಸಳರ ಮಧ್ಯೆ ನಡೆದ ಸಂಘರ್ಷದ ಐತಿಹಾಸಿಕ ಕಾದಂಬರಿ ಇದು. ನಾಟ್ಯಮಯೂರಿ ಶಾಂತಲೆಯ ಪಾತ್ರವನ್ನು ವಿಶೇಷವಾಗಿ ಚಿತ್ರಿಸಿದ ಕೃತಿ ಇದು.

About the Author

ಸಾ.ಶಿ. ಮರುಳಯ್ಯ
(28 January 1931 - 05 February 2016)

ಕವಿ, ವಿಮರ್ಶಕ, ಸಂಶೋಧಕ ಸಾ.ಶಿ. ಮರುಳಯ್ಯ ಅವರು ಜನಿಸಿದ್ದು 1931 ಜನವರಿ 28ರಮದು. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಸಾಸಲು ಗ್ರಾಮದವರು. ತಾಯಿ ಸಿದ್ದಮ್ಮ, ತಂದೆ ಶಿವರುದ್ರಯ್ಯ. ಪ್ರಾಥಮಿಕ ಶಿಕ್ಷಣ ಪಡೆದದ್ದು ಚಿತ್ರದುರ್ಗದಲ್ಲಿ.  ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ಹಂಪಿ ವಿಶ್ವವಿದ್ಯಾಲಯದಲ್ಲಿ ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ ವಿಷಯ ಮಂಡನೆ ಮಾಡಿ ಪಿಎಚ್‌ಡಿ ಪದವಿ ಪಡೆದರು. ಅಧ್ಯಾಪಕರಾಗಿ, ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಶಿವತಾಂಡವ, ವಿಪರ್ಯಾಸ, ಘೋಷವತಿ, ರೂಪಸಿ, ಚೈತ್ರ- ಜ್ಯೋತಿ, ಬೃಂದಾವನ ಲೀಲೆ, ನನ್ನ ಕವನಗಳು(ಕವನ ಸಂಕಲನಗಳು), ಹೇಮಕೂಟ, ...

READ MORE

Related Books