‘ಮೂಕ ಮನಸು’ ಲೇಖಕ ರವೀಶ್ ಎಸ್ ಅವರ ಕಾದಂಬರಿ. ವೇಶ್ಯಾವಾಟಿಕೆ ನಮ್ಮ ಕಾಲಮಾನದ ಶಿಶುವಾಗಿರದೆ ಇತಿಹಾಸದ ಪಳೆಯುಳಿಕೆಯಾಗಿದ್ದರೂ, ಅದು ಇತ್ತೀಚಿನ ದಿನಗಳಲ್ಲಿ ಪಡೆದುಕೊಳ್ಳುತ್ತಿರುವ ಹೊಸ ರೂಪ ಮಾನವ ಸಮಾಜವನ್ನು ಬೆಚ್ಚಿ ಬೀಳಿಸುವಂತಿದೆ. ವೇಶ್ಯಾವಾಟಿಕೆಯ ಈ ಹೊಸ ಆಯಾಮಕ್ಕೆ ಬದಲಾಗುತ್ತಿರುವ ಗಂಡು - ಹೆಣ್ಣುಗಳ ಮನಸ್ಥಿತಿಗಳೆರಡೂ ಕಾರಣ.
ಒಂದೆಡೆ ಹೆಣ್ಣಿನ ಅಮಾಯಕತೆ ಮಾರಾಟವಾಗುತ್ತಿದ್ದರೆ, ಇನ್ನೊಂದೆಡೆ ಹೆಣ್ಣಿನ ಮನಸ್ಥಿತಿಯೇ ಮಾರಾಟಕ್ಕೆ ಸಿದ್ಧವಾಗುತ್ತಿದೆ. ಅನುಭವಿಸಿಯೇ ತೀರಬೇಕೆನ್ನುವ ಬದಲಾಗುತ್ತಿರುವ ಗಂಡಿನ ಮನಸ್ಥಿತಿ ಈ ಬದಲಾವಣೆಗೆ ಜೀವ ತುಂಬುತ್ತಿದೆ. ಈ ಕಾದಂಬರಿಯ ಕಾಲ್ಪನಿಕ ಪಾತ್ರಗಳೊಂದಿಗೆ ನಮ್ಮ ಕಾಲಘಟ್ಟದಲ್ಲಿರುವ ವಾಸ್ತವಿಕ ಕಟುಸತ್ಯಗಳನ್ನು ಬಿಚ್ಚಿಡುತ್ತದೆ.
ಕಾದಂಬರಿಕಾರ, ಉಪನ್ಯಾಸಕ, ಸಂಶೋಧಕ ರವೀಶ್ ಅವರು ರಾಮನಗರ ಜಿಲ್ಲೆಯ, ಕನಕಪುರ ತಾಲ್ಲೂಕಿನ ಯಡಮಾರನಹಳ್ಳಿ ಗ್ರಾಮದವರು. ಕರ್ಮಯೋಗಿ ಕರಿಯಪ್ಪರವರು ಸ್ಥಾಪಿಸಿರುವ ರೂರಲ್ ಕಾಲೇಜಿನಿಂದ ಬಿ. ಎ. ಪದವಿ ಗಳಿಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯದೊಲವು ಮೊದಲಾಯಿತು. ತಮ್ಮ ಬರಹಗಳಲ್ಲಿ ಹಳ್ಳಿಗಾಡಿನ ಚಿತ್ರಣವನ್ನು ಕಣ್ಣು ಕಟ್ಟುವಂತೆ ಮೂಡಿಸಿ ಓದುಗರನ್ನು ನಿಬ್ಬೆರಗಾಗಿಸುತ್ತಾರೆ. ರವೀಶ್ ಅವರು ಮೂವತ್ತಕ್ಕೂ ಅಧಿಕ ಸಂಶೋಧನಾ ಲೇಖನಗಳು ಯು.ಜಿ.ಸಿ. ಮಾನ್ಯತೆ ಪಡೆದಿರುವ ...
READ MOREಮೂಕ ಮನಸ್ಸು-ರವೀಶ್ ಎಸ್