‘ಮೌನಯಾನ’ ಕೃತಿಯು ರಾಹು ಅಲಂದಾರ ಅವರ ಕಾದಂಬರಿಯಾಗಿದೆ. ಸಮಾಜಕ್ಕೆ ಕಂಟಕವಾಗಿರುವ ಆತ್ಮಹತ್ಯೆ, ಬಹುಪತ್ನಿತ್ವ ಪಿಡುಗು ಹೀಗೆ ಒಂದಷ್ಟು ಸಾಮಾಜಿಕ ಪಿಡುಗಗಳನ್ನು ತೊಡೆದು ಹಾಕುವ ಹಿನ್ನೆಲೆಯಲ್ಲಿ ಈ ಕಾದಂಬರಿಯ ಪಾತ್ರಗಳು ಹೋರಾಡುತ್ತವೆ. ಗೌರವಾನ್ವಿತ ಮನೆಯಲ್ಲಿ ಜನಿಸಿದ ಕಥಾನಾಯಕನ ಜೀವನ ಶೈಲಿ ಮತ್ತು ಅವನು ಮಾಡುವ ಅಪರಾಧ ಹೇಗೆ ಇಡೀ ಮನೆತನವನ್ನೇ ನಾಶಗೊಳಿಸುತ್ತದೆ. ಒಬ್ಬ ವ್ಯಕ್ತಿಯ ತಪ್ಪಿನಿಂದ ಐತಿಹ್ಯವುಳ್ಳ ಮನೆತನದ ಗೌರವ ಬೀದಿಪಾಲಾಗುವ ರೀತಿಯನ್ನು ವಿಷವರ್ತುಲದಲ್ಲಿ ಸಿಲುಕಿದ ಕತಾನಾಯಕನ ಸ್ಥಿತಿಗತಿ ಕುರಿತಾಗಿ ಈ ಕಾದಂಬರಿಯನ್ನು ಕಟ್ಟಿಕೊಡಲಾಗಿದೆ.
ಲೇಖಕ ರಾಹು ಅಲಂದಾರ ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿಯವರು. ವೃತ್ತಿಯಲ್ಲಿ ಕಾನ್ ಸ್ಟೇಬಲ್. ಪ್ರಸ್ತುತ ಗದಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆ, ನಟನೆ ಹಾಗೂ ಓದುವುದು ಅವರ ಆಸಕ್ತಿ. ಕೃತಿಗಳು : ಮೌನಯಾನ (ಕಾದಂಬರಿ) , ರೆಕ್ಕೆಯ ಹಾಡು (ಕವನ ಸಂಕಲನ), ಬೆಳದಿಂಗಳು (ಆಧುನಿಕ ವಚನ ಸಂಕಲನ), ಅಲೆದಾಟ (ಕವನ ಸಂಕಲನ). ...
READ MORE