ಮಾತಂಗಿ

Author : ಆನಂದ ಭೋವಿ

Pages 134

₹ 120.00




Year of Publication: 2020
Published by: ಎಸ್.ಎಲ್.ಎನ್ ಪಬ್ಲಿಕೇಷನ್
Address: ನಂ. 347, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ 2ನೇ ಹಂತ, ಬೆಂಗಳೂರು- 29
Phone: 9972129376

Synopsys

‘ಮಾತಂಗಿ’ ಕತೆಗಾರ ಆನಂದ ಭೋವಿ ಅವರ ಕಾದಂಬರಿ. ಪುರಾಣ ಮತ್ತು ಇತಿಹಾಸ ಹಾಗೂ ಸಮಕಾಲೀನ ವಾಸ್ತವಗಳನ್ನು ಪರಸ್ಪರ ಬೆರೆಸಿ ಹೆಣೆದಿರುವ ಆನಂದ ಅವರ ಕಲ್ಪನ ಶಕ್ತಿ ಗಮನ ಸೆಳೆಯುತ್ತದೆ ಎನ್ನುತ್ತಾರೆ ಕಾದಂಬರಿಗೆ ಬೆನ್ನುಡಿ ಬರೆದಿರುವ ಲೇಖಕ ವೈ.ಎಂ. ಯಾಕೊಳ್ಳಿ.

ಕತೆಯನ್ನು ನಿರೂಪಿಸುವಾಗ ಸ್ಥಳಪುರಾಣ ಕಟ್ಟಿಕೊಡುವ ಜನಪದ ಪದ್ಯಗಳನ್ನು ಬಳಸಿಕೊಂಡಿರುವುದು ಕಾದಂಬರಿಗೆ ಒಂದು ವಿಶೇಷ ಶಕ್ತಿ ನೀಡಿದೆ. ಮಾತಂಗಿ ಮತ್ತು ಅವಳ ಪರಿಸರದ ಚಿತ್ರ ಬಿಡಿಸುವಾಗ ಕಾದಂಬರಿಕಾರರ ಭಾಷಿಕ ಶಕ್ತಿ ಅನಾವರಣವಾಗುತ್ತದೆ.

About the Author

ಆನಂದ ಭೋವಿ

ಸವದತ್ತಿ ತಾಲೂಕಿನ ಉಗರಗೋಳದ ಆನಂದ ಭೋವಿಯವರು ಸದ್ಯ ನರಗುಂದ ತಾಲೂಕಿನ ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಪ್ಪತ್ತು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಾಗಿ ಹಾಗೂ ಪ್ರೌಢಶಾಲಾ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. “ಮುತ್ತು ಕಟ್ಯಾಳ ನಮ್ಮವ್ವ”  2014ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪುರಸ್ಕೃತಗೊಂಡ ಕಥಾಸಂಕಲನ. ‘ಹಿಡಿ ಮಣ್ಣಿನ ಬೊಗಸೆ’ ಕಥಾಸಂಕಲನ, ‘ಸುಮ್ಮನಿರದ ಗಜಲ್’ ಕವನ ಸಂಕಲನ ಪ್ರಕಟಗೊಂಡಿವೆ. 2015ರಲ್ಲಿ ಬೇಂದ್ರೆ ಗ್ರಂಥ ಬಹುಮಾನ ದೊರಕಿದೆ. ಹಲವಾರು ಕತೆ ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಹಲವು ಕತೆಗಳು ಬಹುಮಾನ ಪಡೆದಿವೆ. ಚಿಕ್ಕುಂಬಿ ಮಠದಿಂದ ಅಜಾತಶ್ರೀ ...

READ MORE

Conversation

Related Books