ಯುದ್ಧ, ಭಯೋತ್ಪಾದನೆಗಳಿಂದ ಮಾನವ ಜನಾಂಗ ತಲ್ಲಣಿಸುತ್ತಿದೆ. ಆದರೆ, ಮೂಲ ಅಪರಾಧಿಗಳು ಕಾನೂನಿನ ಪರಿಧಿಯಲ್ಲೇ ತಪ್ಪಿಸಿಕೊಂಡು ನಿರಪರಾಧಿಗಳನ್ನು ಬಂಧಿಯಾಗಿಸಿ, ಅಪರಾಧಿಗಳನ್ನು ಸೃಷ್ಟಿಸುತ್ತ ಸಂದರ್ಭಕ್ಕೆ ತಕ್ಕಂತಹ ಸಾಕ್ಷಿಗಳನ್ನು ಒದಗಿಸುತ್ತಿದ್ದಾರೆ. ಇಂಥ ‘ಸಾಕ್ಷಿ’ಗಳು ಸಾಕ್ಷಿ ಪ್ರಜ್ಞೆಯನ್ನು ಕಾಡಿಸಿದ್ದರ ಫಲ ಈ ಕಿರು ಕಾದಂಬರಿ ‘ಮರಣದಂಡನೆ’.
ಭಯೋತ್ಪಾದನೆಯನ್ನು ಗಮನದಲ್ಲಿಟ್ಟುಕೊಂಡು ಬದುಕಿನ ವ್ಯಂಗ್ಯ ಮತ್ತು ವೈರುಧ್ಯಗಳನ್ನು ಅಭಿವ್ಯಕ್ತಿಸುವ ಒಂದು ಪ್ರಾಮಾಣಿಕ ಪ್ರಯತ್ನವಾಗಿ ಬರಗೂರು ಅವರ ಈ ಕೃತಿ ಮೂಡಿ ಬಂದಿದೆ.
ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕತೆ-ಕಾದಂಬರಿ-ಕಾವ್ಯಗಳಂತಹ ಸೃಜನಶೀಲ ಕೃತಿಗಳ ಜೊತೆಗೆ ಚಿಂತನ ಪರ ಬರಹ, ವಿಮರ್ಶೆಗಳ ಮೂಲಕ ಹೆಸರಾದವರು. ರಾಮಚಂದ್ರಪ್ಪ ಅವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ, ನಿರ್ದೇಶಕ ಆಗಿದ್ದರು. ಸಾಹಿತ್ಯದಷ್ಟೇ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನಿಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ವಿಭಿನ್ನ ಹಾದಿ ಹಿಡಿದವರು. ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ...
READ MORE