"ಮರಳಿ ಬಂದಿತು ಶ್ರಾವಣ” ಒಂದು ಉತ್ತಮ ಸಾಮಾಜಿಕ ಕಾದಂಬರಿ. ಮನುಷ್ಯನಲ್ಲಿ ಸ್ವಾರ್ಥ ಮನೆ ಮಾಡಿದಾಗ ತನ್ನ ಸ್ವಾರ್ಥಕ್ಕಾಗಿ ಯಾರನ್ನು ವಂಚಿಸಲೂ ಹಿಂಜರಿಯುವುದಿಲ್ಲ. ರಕ್ತಸಂಬಂಧ, ಸ್ನೇಹ ಎಲ್ಲವೂ ಸ್ವಾರ್ಥದ ಮುಂದೆ ಗೌಣವಾಗುತ್ತವೆ. ತಮ್ಮ ಉಳಿವಿಗಾಗಿ, ತಮ್ಮ ಉಜ್ವಲ ಭವಿಷ್ಯತ್ತಿಗಾಗಿ ಅಣ್ಣನ ಒಳ್ಳೆಯ ತನದ ಲಾಭ ಪಡೆದು, ಅಣ್ಣನ ಬಾಳನ್ನೇ ಹಾಳು ಮಾಡುವ ತಮ್ಮಂದಿರು. ಅಣ್ಣನ ಸಂಸಾರವೇ ಇದರಿಂದ ಭೀಕರವಾಗುತ್ತದೆ. ಹೀಗೆ ದುಖಃದ ಬದುಕು ಸಾಗಿಸುತ್ತಿರುವಾಗ ಯಾರಿಂದ, ಹೇಗೆ ಸರಿಹೋಗುತ್ತದೆ ಎನ್ನುವುದೇ ಈ ಕಾದಂಬರಿಯ ಕಥಾ ವಸ್ತು. ಸಂಬಂಧಗಳ ಬಗ್ಗೆ ಅನುಭೂತಿಯುಳ್ಳವರು ಈ ಕಾದಂಬರಿ ಓದಬಹುದು.
ಕಾದಂಬರಿಗಾರ್ತಿ ರಾಜೇಶ್ವರಿ ಕೆ. ವಿ. ಅವರು ಕನ್ನಡದ ಜನಪ್ರಿಯ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಅಂಚೆ ಕಛೇರಿಯಲ್ಲಿ ವೃತ್ತಿ ಆರಂಭಿಸಿದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ವೆಂಕಟಪತಿ, ತಾಯಿ ಸಾವಿತ್ರಮ್ಮ. ‘ಬಾಳೆಂಬ ದೋಣಿ, ವಂಶೋದ್ದಾರಕ, ಮಧೂಲಿಕ, ಚಿಗುರಿದ ಕುಡಿ, ಪಂಜರದ ಗಿಳಿ, ಸೌಂದರ್ಯ, ಮೊದಲ ಮೆಟ್ಟಿಲು, ಸೂತ್ರಧಾರ, ಹೊಸ ಬದುಕು, ಹರ್ಷದ ಹೊನಲು, ಹೊನ್ನ ಹರಿಗೋಲು’ ಕಾದಂಬರಿಗಳನ್ನು ರಚಿಸಿದ್ದಾರೆ. ಅವರು ಕಾದಂಬರಿಗಳಲ್ಲದೆ ವಾಸ್ತುಶಿಲ್ಪ, ವಿಜ್ಞಾನ, ಹೊಲಿಗೆ, ಪಾಕಶಾಸ್ತ್ರ, ಹಾಸ್ಯ, ಕಾವ್ಯ, ಕಂಪ್ಯೂಟರ್ ಮೊದಲಾಗಿ ವಿಷಯ ವಸ್ತುಗಳಿಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ...
READ MORE