‘ಮಣ್ಣಿನ ಮಗಳು’ ಕೃಷ್ಣಮೂರ್ತಿ ಪುರಾಣಿಕರ ಸಾಮಾಜಿಕ ಕಾದಂಬರಿ. ಈ ಕೃತಿ ಇದೇ ಹೆಸರಿನಲ್ಲಿ ಚಲನಚಿತ್ರವೂ ಆಗಿದೆ. ಮಣ್ಣಿನ ಮಗಳಾಗಿ ಬಾಳುವ ಹೆಬ್ಬಯಕೆಯೊಡನೆ ವಸುಮತಿ ಜಮೀನ್ದಾರ್ ಬಾಲಚಂದ್ರನ ಕೈ ಹಿಡಿದಳು. ಆದರೆ ಕೂಲಿಯ ಹೆಂಗಸರಂತೆ ಹೊಲದಲ್ಲಿ ದುಡಿಯುವುದು ಮನೆತನದ ಕುಂದು ಎಂದು ಮಾವ ಸಿಟ್ಟಾದ, ಕೆಲಸ ಮಾಡುವುದು ತಮ್ಮ ಜಮೀನ್ದಾರಿಕೆಗೇ ಅವಮಾನ ಎಂದು ಆಕೆಯ ಗಂಡ ದುಶ್ಚಟಗಳಿಗೆ ಬಲಿಯಾದ. ಸಂಪತ್ತು ಸಾಲಗಾರರ ವಶವಾಗಿ ವಸುಮತಿ ಕೈಮಕ್ಕಳೊಡನೆ ಮಣ್ಣತಾಯಿಯ ಸೇವೆ ಮಾಡಲು ತನ್ನದಾಗಿ ಉಳಿದ ಎರಡು ಹೊಲಗಳಲ್ಲಿ ನಿಂತಳು. ಬೆವರು ಸುರಿಸಿ ಭೂಮಿಯನ್ನು ಅವಳೊಂದು ನೆನೆದರೆ ವಿಧಿಯೊಂದು ನೆನೆಯಿತು. ಆದುದೇನು? ವಸುಮತಿ ವಿಧಿ ಒಡ್ಡಿದ ಅಗ್ನಿಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಚೊಕ್ಕ ಬಂಗಾರವಾಗಿ ಬದುಕಿದಳು ಅದು ಈ ಕಾದಂಬರಿಯ ಕಥಾ ಹಂದರ ಜೊತೆಗೆ ಹಳ್ಳಿಗಳ ಸ್ಥಿತಿಗತಿ, ರೈತರ ಜೀವನಗಳನ್ನು ಈ ಕೃತಿಯಲ್ಲಿ ಪುರಾಣಿಕರು ಮಾರ್ಮಿಕವಾಗಿ ಚಿತ್ರಿಸಿದ್ದಾರೆ.
ಅಗ್ರಶ್ರೇಣಿಯ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು ಹುಟ್ಟಿದ್ದು ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ.1911 ಸೆಪ್ಟಂಬರ್ 5ರಂದು. 1933ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಪುರಾಣಿಕರು 1946ರಲ್ಲಿ 'ರಾಮೂನ ಕಥೆಗಳು' ಪ್ರಕಟಿಸಿದರು. ಅವರ 'ಧರ್ಮದೇವತೆ' ಕಾದಂಬರಿ 'ಕರುಣೆಯೇ ಕುಟುಂಬದ ಕಣ್ಣು' ಎಂಬ ಚಲನಚಿತ್ರವಾಗಿದೆ. ಪುರಾಣಿಕರ 11 ಕೃತಿಗಳು ಬೆಳ್ಳೆತೆರೆ ಕಂಡಿವೆ. 'ಸನಾದಿ ಅಪ್ಪಣ್ಣ' ಕನ್ನಡಿಗರೆಂದೂ ಮರೆಯದ ಕೃತಿ. ಮೊದಲ ಪ್ರಕಟಿತ ಗದ್ಯ ಕೃತಿ, 'ರಾಮೂನ ಕಥೆಗಳು'. ಮೊದಲ ಕವನ ಸಂಕಲನ 'ಬಾಳ ಕನಸು'. ಮೊದಲ ಕಾದಂಬರಿ 'ಮುಗಿಲಮಲ್ಲಿಗೆ'. 'ಮೌನಗೌರಿ', 'ಮುತ್ತೈದೆ', `ಮನೆ ತುಂಬಿದ ಹೆಣ್ಣು', 'ಮಣ್ಣಿನ ಮಗಳು', 'ಕುಲವಧು', 'ಮನಸೋತ ಮನದನ್ನೆ', 'ಧರ್ಮ ...
READ MORE