ಲೇಖಕಿ ಭಾಗ್ಯರೇಖಾ ದೇಶಪಾಂಡೆ ಅವರ ಪ್ರಥಮ ಕಾದಂಬರಿ ʻಮಂಡೋದರಿʼ. ರಾವಣನ ಪತ್ನಿ, ಪಂಚಕನ್ಯೆಯರಲ್ಲಿ ಒಬ್ಬಳೆಂದು ಪರಿಗಣಿಸಲ್ಪಟ್ಟ ಮಂಡೋದರಿ. ಈ ಪೌರಾಣಿಕ ಪಾತ್ರವನ್ನು ಆಧರಿಸಿದ ಕಾಲ್ಪನಿಕ ಕಾದಂಬರಿ. ʻಮಂಡೋದರಿಯಂತಹ ದಾನವ ಕುಲದ ಹೆಣ್ಣಿಗೆ ತನ್ನದೇ ಆದ ಆಕಾಂಕ್ಷೆಗಳಿರಬಹುದೆ? ಹಾಗಿದ್ದರೂ ಅವುಗಳು ತಮ್ಮ ನಿರೀಕ್ಷಿತ ಫಲವನ್ನು ಕಾಣಬಹುದೇ? ಅದರಲ್ಲೂ ತಾನು ಪ್ರೀತಿಸುವ ಗಂಡ ಮತ್ತೋರ್ವ ಹೆಣ್ಣನ್ನು ಕದ್ದು ತಂದು ಆಕೆಯ ಧ್ಯಾನದಲ್ಲಿ ಮುಳುಗಿದ್ದರೆ..?ʼ ಹೀಗೆ ರಾವಣ ಸೀತೆಯನ್ನು ಅಪಹರಿಸಿ ತಂದ ಸಂದರ್ಭದಲ್ಲಿ ಮಂಡೋದರಿ ಅನುಭವಿಸಿದ ನೋವು, ವೇದನೆ, ಆಗ ಇದ್ದ ಮಂಡೋದರಿ ಮನಸ್ಥಿತಿ, ಇದೆಲ್ಲದರ ಕುರಿತ ಚಿತ್ರಣ ಈ ಕಾದಂಬರಿಯ ವಸ್ತು.
ಲೇಖಕಿ ಭಾಗ್ಯರೇಖಾ ದೇಶಪಾಂಡೆ ಮೂಲತಃ ಹುಬ್ಬಳ್ಳಿಯವರು. ವೃತ್ತಿಯಿಂದ ಸಾಫ್ಟವೇರ್ ಎಂಜಿನಿಯರ್. ಇವರ ಕಥೆ, ಚುಟುಕು ಲೇಖನಗಳು ನಾಡಿನ ವಿವಿಧ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಕೃತಿಗಳು: ವಿಜ್ಞಾನಿ ಆರ್. ರಾಜಲಕ್ಷ್ಮಿ(ಆತ್ಮ ಚರಿತ್ರೆ- ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದ) ಮಂಡೋದರಿ (ಪೌರಾಣಿಕ ಕಾದಂಬರಿ, ಲೇಖಕಿಯರ ಸಂಘದ ಕಾಕೋಳು ಸರೋಜಮ್ಮ ದತ್ತಿ ಪ್ರಶಸ್ತಿ ಲಭಿಸಿದೆ.), ಪಾನಿಪುರಿ ಮತ್ತು ಇತರ ಕಥೆಗಳು (ಕಥಾ ಸಂಕಲನ), ...
READ MORE