ಇದೊಂದು ವೈಚಾರಿಕ ಕಾದಂಬರಿ. ತಮ್ಮ ಅನುಭವದ ಆಧಾರದ ಮೇಲೆ ಆಧ್ಯಾತ್ಮ ವಿಜ್ಞಾನದ ಅಧ್ಯಯನ ಶೀಲತೆಯಿಂದ ತಿಳಿದುಕೊಂಡ ಸಂಗತಿಗಳನ್ನೂ ಆಧಾರವಾಗಿಟ್ಟುಕೊಂಡು ಮೌಢ್ಯ ನಿವಾರಣೆ ಮಾಡುವ, ಸಮನ್ವಯತೆ ಸಾಧಿಸುವ ಆಶಾಭಾವನೆಯೊಂದಿಗೆ ಈ ಕೃತಿ ರಚಿಸಿದ್ದಾರೆ.
ಕಾದಂಬರಿಯ ಕಥಾವಸ್ತು, ಪಾತ್ರಗಳು ಮತ್ತು ಘಟನೆಗಳು ಸಮಾಜದಲ್ಲಿ ಬೇರೂರಿರುವ ಮೌಢ್ಯಗಳಾಗಿವೆ. ದೇವರು, ಪ್ರಕೃತಿ, ಆತ್ಮ ಪರಮಾತ್ಮ, ಪುನರ್ಜನ್ಮ, ಶಾಸ್ತ್ರ ಮುಂತಾದ ವಿಷಯಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿದ್ದಾರೆ. ಇಷ್ಟೂ ವರ್ಷಗಳಿಂದ ಸತ್ಯವೆಂದೇ ನಂಬಿಕೊಂಡು ಬಂದ ಶಾಸ್ತ್ರ ಸಂಪ್ರದಾಯಗಳ ಹೊಸ ದೃಷ್ಟಿಕೋನವನ್ನು ಕೃತಿ ಪರಿಚಯಿಸುತ್ತದೆ.