ಸಮುದ್ರವಳ್ಳಿ ವಾಸು ಅವರ ಕಾದಂಬರಿ ಮಲೆನಾಡಿನ ಮಾರ್ಗದಾಳುಗಳು. 2018ರಲ್ಲಿ ಒದಲ ಮುದ್ರಣ ಕಮಡ ಈ ಕಾದಂಬರಿ 2021ರಲ್ಲಿ ಮರುಮುದ್ರಣವನ್ನು ಕಂಡಿದೆ. ಎನ್ ಶೈಲಜಾ ಅವರು ಈ ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಸಾಹಿತಿಗಳು ಎನ್ ಎಲ್ ಚನ್ನೇಗೌಡ ಅವರು ಕೃತಿಯಲ್ಲಿ ಬೆನ್ನುಡಿಯ ಮಾಉಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, "ಒಬ್ಬ ಸಾಹಿತಿಯ (ಕವಿಯ) ಆತ್ಮ ಚರಿತ್ರೆ ಅವನ ಕೃತಿಯಲ್ಲೇ ಇರುತ್ತದೆ' ಎಂದು ಸಾಹಿತ್ಯ ಓದುಗರ ಅಭಿಪ್ರಾಯ. ಈ ಮಾತು ಗೆಳೆಯ ವಾಸುರವರ ಸಾಹಿತ್ಯದಲ್ಲಿ ಓದುಗರನ್ನು ಮುಖಾಮುಖಿಯಾಗಿಸುತ್ತದೆ. ಇವರ ಹಾಸ್ಯ ಬರಹಗಳು, ಹಾಗೂ ಚುಟುಕುಗಳನ್ನು ನಾನು ಗಮನಿಸಿದ್ದೇನೆ. ಈ ನಿಟ್ಟಿನಲ್ಲಿ ಉದಯೋನ್ಮುಖ ಸಾಹಿತಿಯಾಗಿ ಯಶಸ್ವಿಯಾಗಿದ್ದಾರೆ. ಈ “ಮಲೆನಾಡಿನ ಮಾರ್ಗದಾಳುಗಳು" ವಿದ್ಯುತ್ ಇಲಾಖೆಯ ನೌಕರರ ಸತ್ಯ ಘಟನೆಗಳನ್ನು ವಸ್ತುವಾಗಿಸಿಕೊಂಡು ಹೊರಬಂದ ಕಾದಂಬರಿ. ಮಲೆನಾಡಿನಲ್ಲಿ ಒಬ್ಬ ವಿದ್ಯುತ್ ಇಲಾಖೆಯಲ್ಲಿ ಲೈನೈನ್ ಆಗಿ ಕೆಲಸ ಮಾಡುವವನ ಅನುಭವ, ಕಷ್ಟ ಸಂಕಷ್ಟಗಳೇ ಕಥಾರೂಪವಾಗಿ ಅಲ್ಲಲ್ಲಿ ಹಾಸ್ಯಮಿಶ್ರಿತವಾಗಿ ನೈಜತೆಗೆ ಹತ್ತಿರವಾಗಿ ದಾಖಲಾಗಿರುವುದನ್ನು ನಾವು ಕಾಣುತ್ತೇವೆ. ಕಾದಂಬರಿ ಓದುಗರನ್ನು ಕುತೂಹಲಭರಿತರನ್ನಾಗಿ ಮಾಡಿ ಮುಂದೆ ಮುಂದೆ ಎಂಬ...!? ಈ ಚಿಹ್ನೆಗಳೊಂದಿಗೆ ಕರೆದುಕೊಂಡು ಹೋಗುತ್ತದೆ. ಸಂಸಾರ, ಪರಿಸರ, ಮೊಬೈಲ್ ತಂದಿಟ್ಟ ಅವಾಂತರ, ದನವೊಂದು ಕರೆಂಟ್ ಕಂಬಕ್ಕೆ ಸಿಲುಕಿ ಸಾಯುವ ಪ್ರಸಂಗ, ಮೇಲಾಧಿಕಾರಿಗಳ ಮೇಲಾಟ, ಒಬ್ಬ ಮಾರ್ಗದಾಳುವಿನ ತೊಳಲಾಟ ಎಲ್ಲವೂ ಪ್ರಸ್ತುತ ವಾಸ್ತವದ ಸಾರ್ವಕಾಲಿಕ ಸತ್ಯವನ್ನು ಬಿಚ್ಚಿಡುತ್ತಾ ಹೋಗುವ ಈ ಕಾದಂಬರಿಯನ್ನು ಓದಿಯೇ ಸಂತೋಷ ಪಡಬೇಕು. ಗೆಳೆಯ ಸಮುದ್ರವಳ್ಳಿ ವಾಸುರವರಿಂದ ಇಂತಹ ಅನೇಕ ಕೃತಿಗಳು ಹೊರಬರಲೆಂದು ಆಶಿಸುತ್ತೇನೆ ಎಂಬುದಾಗಿ ಹೇಳಿದ್ದಾರೆ.
ಸಮುದ್ರವಳ್ಳಿ ವಾಸು ಅವರು ಮೂಲತಃ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ವಾಟೆಹೊಳೆ ಬಳಿಯ ಸಮುದ್ರವಳ್ಳಿಯವರು. ತಂದೆ ಕೃಷ್ಣಗೌಡ, ತಾಯಿ ಕಮಲಮ್ಮ. ಪಿಯುಸಿವರೆಗೆ ಓದು. ವಿದ್ಯುತ್ ಇಲಾಖೆಯಲ್ಲಿ ವೃತ್ತಿ ಪ್ರಾರಂಭಿಸಿ, ಸದ್ಯ, ಕೆ.ಹೊಸಕೋಟೆ ವಿದ್ಯಾತ್ ಇಲಾಖೆಯಲ್ಲಿ ಲೈನ್ ಮ್ಯಾನ್ ಆಗಿ (ಮಾರ್ಗದಾಳು) ಕೆಲಸ ಮಾಡುತ್ತಿದ್ದಾರೆ. ಲೇಖನ, ಕಥೆ, ನಾಟಕ, ಕವಿತೆ, ವಿಮರ್ಶೆ, ಚುಟುಕು ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದ್ದು, ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಕೃತಿಗಳು: ಸಿಹಿ ಮುತ್ತು (ಚುಟುಕು ಸಂಕಲನ), 'ಯಡವಟ್ಟು ವಾಸು (ಹಾಸ್ಯ ಸಂಕಲನ), ಮಕ್ಕಳ ಕಿರು ನಾಟಕಗಳು (ನಾಟಕ), ಹುಚ್ಚುಡ್ಡಿ (ಕಥಾ ಸಂಕಲನ), ಢಣ ಢಣ ...
READ MORE