ಭಯೋತ್ಪಾದನೆಯ ಭೀಕರ ಚಿತ್ರಣಗಳೊಂದಿಗೆ, ಅದರ ಉಗಮ ಹಾಗೂ ಇತಿಹಾಸವನ್ನು ತಿಳಿಸುತ್ತಾರೆ ಕಾದಂಬರಿಕಾರರು. ದೇಶ ರಕ್ಷಣೆಗೆ ತನ್ನ ಇಡೀ ಕುಟುಂಬವನ್ನು ಕಳೆದುಕೊಳ್ಳಲೂ ಹಿಂದು ಮುಂದು ನೋಡದ ಅಭಿಮನ್ಯು ಆಪರೇಷನ್ ಆ್ಯಂತ್ರಾಸ್ ತಡೆಗಟ್ಟಬಲ್ಲನೇ ಎಂಬುವುದು ಕಥಾವಸ್ತು. ರೋಚಕತೆಯನ್ನು ಕಾಪಾಡಿಕೊಂಡು ಸರಾಗವಾಗಿ ಓದಿಸಿಕೊಂಡು ಹೋಗುವುದು ಕಾದಂಬರಿಯ ಮತ್ತೊಂದು ವಿಶೇಷತೆ.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE