ಖ್ಯಾತ ಅನುವಾದಕ-ಲೇಖಕ ಡಾ. ಶಿವಾನಂದ ಬೇಕಲ್ ಅವರ ಕಾದಂಬರಿ-ಮಳೆ ನಿಂತ ಮೇಲಿನ ಮರ. ಗುಲಬರ್ಗಾ ವಿಶ್ವವಿದ್ಯಾಲಯದಿಂದ 2002ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾದಂಬರಿ ಇದು. ಉದಯವಾಣಿ ಪತ್ರಿಕೆಯ 2002ನೇ ಸಾಲಿನ ಅತ್ಯುತ್ತಮ ಆಯ್ಕೆಯ ಕಾದಂಬರಿ ಎಂಬ ಹೆಗ್ಗಳಿಕೆಯೂ ಈ ಕಾದಂಬರಿಗಿದೆ. ಖ್ಯಾತ ಕಾದಂಬರಿಗಾರ್ತಿ ಗೀತಾ ನಾಗಭೂಷಣ ಅವರು ‘ಸರ್ವ ಸಾಕ್ಷಿತ್ವದ ನಿರೂಪಣೆಯ ಮೇಲೆ ನೆಲೆಯೂರಿದ ಚೆಂದದ ಕಾದಂಬರಿ ಇದು’ ಎಂದು ಪ್ರಶಂಸಿಸಿದ್ದಾರೆ.
ಡಾ. ಶಿವಾನಂದ ಬೇಕಲ್ ಅವರು ಹುಟ್ಟಿದ್ದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಐತಿಹಾಸಿಕ ಸ್ಥಳ ಬೇಕಲ್ ನಲ್ಲಿ. ತಂದೆ- ಬೇಕಲ್ ಸಾಂತನಾಯಕರು, ತಾಯಿ- ಲಲಿತಾಬಾಯಿ. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ವಿದ್ಯಾಭ್ಯಾಸ ನಡೆದದ್ದು ಬೇಕಲ್‌ನಲ್ಲಿ . ಕಾಸರಗೋಡಿನಲ್ಲಿ ಬಿ.ಎಸ್ಸಿ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಡ್, ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಎ. ಮತ್ತು ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. 16ನೇ ವಯಸ್ಸಿನಲ್ಲಿ ಬರೆದ ‘ಕೇದಗೆಯ ಹಾವು’ ಮೊದಲ ಕಥೆಗೆ 1968ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಗಳಿಸಿತು. ಇವರ ಲೇಖನ ಕೃಷಿ ಮಂಗಳೂರಿನ ನವಭಾರತ, ಕಿನ್ನಗೋಳಿಯ ಯುಗಪುರುಷ ನಂತರ ಸುಧಾ, ತರಂಗ, ಪ್ರಜಾವಾಣಿ, ...
READ MORE