ಮಳೆಬಯಲು

Author : ಕಾ.ತ.ಚಿಕ್ಕಣ್ಣ

Pages 274

₹ 280.00

Buy Now


Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಅಂಚೆ, ಎಮ್ಮಿಗನೂರು (ವಯಾ) ಬಳ್ಳಾರಿ-583113

Synopsys

ಹುಟ್ಟೂರು ಬಿಟ್ಟು ನಗರಕ್ಕೆ ವಲಸೆ ಬರುವುದು, ಹೊಸ ವಾತವರಣಕ್ಕೆ ಹೊಂದಿಕೊಳ್ಳಲು ತಲ್ಲಣಿಸುವ ಮನಸ್ಸು ಹೊಸದಾಗಿ ಬದುಕು ಕಟ್ಟಿಕೊಡುವ ಧಾವಂತ, ಹಳ್ಳಿಯಿಂದ ನಗರಕ್ಕೆ ವಲಸೆ ಹೋದವರ ಬದುಕಿನ ಸಿತ್ಯಂತರದ ಕುರಿತು ಲೇಖಕರು ಈ ಕಾದಂಬರಿಯಲ್ಲಿ ವಿವರಗಳನ್ನು ಒದಗಿಸಿದ್ಧಾರೆ.

ಭೂಮಿ ಒಡೆತನದಲ್ಲಿ ಸಾರ್ಥಕ ಮಾಡಿಕೊಳ್ಳುತ್ತಿರುವ ಪ್ರಸ್ತುತ ತಲೆಮಾರಿನ ಚಿತ್ರಣವನ್ನು ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ. ಹಳ್ಳಿ ಬದುಕಿನ ಸಾಮಾಜಿಕ, ಸಾಂಸ್ಕೃತಿಕ ಪಲ್ಲಟ, ಜನಪದ ಸಂಸ್ಕೃತಿ ಮತ್ತು ಆಧುನಿಕ ಸಾಮಾಜಿಕ ಸಮೀಕರಣದ ನಡುವಿನ ಮಿಳಿತಗಳ ಕುರಿತು ಇಲ್ಲಿ ವಿವರಿಸಲಾಗಿದೆ. ಮನುಷ್ಯ ಮೂಢನಾಗಿ ಮಾಡಿಕೊಂಡ ಹಲವು ಜೀವವಿರೋಧಿ ಕಟ್ಟಳೆಗಳನ್ನು ಇಲ್ಲಿರುವ ಪಾತ್ರಗಳು ಮುರಿಯುತ್ತವೆ.

About the Author

ಕಾ.ತ.ಚಿಕ್ಕಣ್ಣ
(30 May 1952)

ಕತೆಗಾರ-ಕಾದಂಬರಿಕಾರ ಕಾ.ತ. ಚಿಕ್ಕಣ್ಣ ಅವರು ಮೂಲತಃ ಮೈಸೂರು ಜಿಲ್ಲೆಯ ಕಾಳಮ್ಮನವರ ಕೊಪ್ಪಲು ಗ್ರಾಮದವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾಗಿ ನಿವೃತ್ತರಾಗಿರುವ ಚಿಕ್ಕಣ್ಣ ಅವರು ಸಂತಕವಿ ರಾಷ್ಟ್ರೀಯ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯ ಸಂಚಾಲಕರು. ನಾಲ್ಕು ಕಥಾಸಂಕಲನ, ಮೂರು ಕಾದಂಬರಿ ರಚಿಸಿದ್ದಾರೆ, ’ಮುಂಜಾವು’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ. ಅವರ ’ವಧೂಟಿ’ ನಾಟಕಕ್ಕೆ ಆರ್ಯಭಟ ಪ್ರಶಸ್ತಿ ಲಭಿಸಿದೆ.  ಹಲವು ಸಮಿತಿಗಳ ಸದಸ್ಯ ಕಾರ್ಯದರ್ಶಿ, ಸಂಚಾಲಕರಾಗಿ ಕಾರ್ಯನಿರ್ವಹಿಸಿರುವ ಅವರು ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು.  ಬಿಳಲು ಬಿಟ್ಟ ಬದುಕು, ಒಡಲುರಿ, ವಾಸನಾಮಯ ಬದುಕಿನ ಆಚೆ ಈಚೆ, ಮನಸ್ಸು ...

READ MORE

Related Books