ಲೇಖಕ ಸದ್ಯೋಜಾತ ಭಟ್ಟ ಅವರ ಐತಿಹಾಸಿಕ ಕಾದಂಬರಿ-ಮಾಗಧೇಯ. ಐತಿಹಾಸಿಕವಾಗಿ ಪ್ರಸಿದ್ಧಿಯ ನೆಲ, ಸಾಮ್ರಾಜ್ಯ- ಮಗಧ. ಗುಪ್ತರ ಸಾಮ್ರಾಜ್ಯದಲ್ಲಿ ಮಗಧ ಪ್ರದೇಶ ಅತ್ಯಂತ ವೈಭವದ ಬೀಡಾಗಿತ್ತು. ಅದು ಸ್ವರ್ಣಯುಗ ಎಂದೇ ಕರೆಯಲಾಗುತ್ತಿತ್ತು. ಸಮುದ್ರಗುಪ್ತ, ಬಿಂಬಸಾರ, ಅಮೋಘವರ್ಷ ಇವರೆಲ್ಲರೂ ಮಗಧ ಸಾಮ್ರಾಜ್ಯವನ್ನು ಆಳಿದವರೇ. ಕಾಶಿ ಪಟ್ಟಣವನ್ನು ವಿಧ್ಯೆಯ ನೆಲೆವೀಡಾಗಿ ರೂಪುಗೊಂಡಿತ್ತು -ಮಗಧರ ಆಳ್ವಿಕೆಯಲ್ಲೇ. ಮಗಧ ಸಾಮ್ರಾಜ್ಯದ ಹುಟ್ಟು, ಇತಿಹಾಸ ಪ್ರಸಿದ್ಧಿಯ ಅಂಶಗಳು, ಸುವರ್ಣಯುಗ ಹಾಗೂ ಕಾಶಿಯನ್ನು ವಿದ್ಯಾಕೇಂದ್ರವನ್ನಾಗಿಸಿ ಕೀರ್ತಿ ಎಲ್ಲವನ್ನೂ ಈ ಐತಿಹಾಸಿಕ ಕಾದಂಬರಿ ಕಟ್ಟಿಕೊಡುತ್ತದೆ.
ಲೇಖಕ, ಸಂಶೋಧಕ ಸದ್ಯೋಜಾತ ಭಟ್ಟ ಮೂಲತಃ ಉಡುಪಿ ಜಿಲ್ಲೆಯ ಬೈಂದೂರಿನವರು. ಕನ್ನಡ ಪಂಡಿತರಾದ ಅವರು ಶಾಸನಗಳ ಅಧ್ಯಯನ ಮತ್ತು ಶಾಸನಗಳ ಪದಕೋಶಗಳ ರಚನೆಯ ಜೊತೆಗೆ ಶಾಸನಗಳಲ್ಲಿ ಬಳಸಲ್ಪಟ್ಟ ಲಿಪಿಗಳ ಅಧ್ಯಯನ ನಡೆಸಿದ್ದಾರೆ. ಖರೋಷ್ಟಿ, ಬ್ರಾಹ್ಮಿ, ಶಾರದಾ, ನಾಗರೀ ನಂದಿನಾಗರೀ ಮತ್ತು ಕನ್ನಡ ಲಿಪಿಗಳ ಲಿಪ್ಯಂತರಣ. ಪ್ರಸ್ತುತ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆರಂಭಗೊಂಡ ಪಾಲಿಯೋಗ್ರಾಫಿ ಮತ್ತು ಮ್ಯಾನ್ಯುಸ್ಕ್ರಿಪ್ಟಾಲಜಿಯಲ್ಲಿ ಬೋಧಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ’ಶಿಲೆಗಳಲ್ಲಡಗಿದ ಸತ್ಯ’, ’ನಾಸತ್ಯಾ’ ಅವರ ಕೃತಿಗಳು. ’ಕಾಲಯಾನ’ ಅವರ ಇತ್ತಿಚಿನ ಕೃತಿ. ...
READ MORE