ಮಧುವನ

Author : ಎಂ.ಕೆ. ಇಂದಿರಾ

Pages 216

₹ 90.00




Year of Publication: 2013
Published by: ಇಂದಿರಾ ಪ್ರಕಾಶನ
Address: ಬೆಂಗಳೂರು

Synopsys

ಮಲೆನಾಡಿನ ನೈಸರ್ಗಿಕ ವರ್ಣನೆಯೊಂದಿಗೆ ಕಾದಂಬರಿಗಳನ್ನು ಬರೆದ ಖ್ಯಾತಿಯ ಎಂ.ಕೆ.ಇಂದಿರಾ ಅವರ ಮತ್ತೊಂದು ಕಾದಂಬರಿ-ಮಧುವನ. ಈ ಕೃತಿಯು ಕಾದಂಬರಿ-‘ಸದಾನಂದ’ನ ಮುಂದುವರಿದ ಭಾಗ. ಸದಾನಂದರ ಎಸ್ಟೇಟಿನ ಹೆಸರು-ಮಧುವನ. ವಿಧವೆ ಕಮಲಾ ಅವರನ್ನು ಮದುವೆಯಾಗುವ ಮೂಲಕ ಮಧುವನಕ್ಕೆ ಕರೆತರುವ ಸದಾನಂದನ ನಿರ್ಧಾರ ಆಗಿನ ಕಾಲದಲ್ಲಿ ಒಪ್ಪಿಗೆಯಾಗದ ಸಾಮಾಜಿಕ ನಿರ್ಧಾರ. ಆದರೆ, ಅದನ್ನು ಸದಾನಂದ ಎದುರಿಸುವ ರೀತಿ, ಸಮಾಜದ ತಪ್ಪು ನಿರ್ಧಾರಗಳಿಗೆ ಹೇಗೆ ಉತ್ತರಿಸಬೇಕು ಎಂಬುದರ ಬಗ್ಗೆ ಕಮಲಾ ಅವರನ್ನೂ ಮಾನಸಿಕವಾಗಿ ತಯಾರು ಮಾಡುವ ರೀತಿ ಗಮನ ಸೆಳೆಯುತ್ತದೆ. ಲೇಖಕಿಯ ದೂರದೃಷ್ಟಿಯ ಈ ನೋಟ ಸದಾ ಎಚ್ಚರವಾಗಿರುವುದನ್ನು ಓದುಗರು ಗುರುತಿಸಬಹುದು.

About the Author

ಎಂ.ಕೆ. ಇಂದಿರಾ
(05 January 1917 - 15 March 1994)

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು 05-01-1917 ರಂದು. ಊರು ಮಲೆನಾಡಿನ ತೀರ್ಥಹಳ್ಳಿ. ತಂದೆ ತರೀಕೆರೆ ಸೂರ್ಯನಾರಾಯಣ, ತಾಯಿ ಬನಶಂಕರಮ್ಮ. ಇಂದಿರಾ ಓದಿದ್ದು, ಕನ್ನಡ ಮಾಧ್ಯಮಿಕ ಶಾಲೆಯ  2ನೇಯ ತರಗತಿವರೆಗೆ ಮಾತ್ರ. ತಮ್ಮ 12 ವರ್ಷಕ್ಕೆ ಮದುವೆಯಾಯಿತು. ಅವರು ಬರೆಯಲು ಆರಂಭಿಸಿದ್ದು 1963ರಲ್ಲಿ. ತುಂಗಭದ್ರ ಅವರ ಮೊದಲ ಕೃತಿ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು.ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ"."ತುಂಗಭದ್ರೆ"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ...

READ MORE

Related Books