ಆರತಿ ವೆಂಕಟೇಶ್ ಅವರ ಸಾಮಾಜಿಕ ಕಾದಂಬರಿ ಮಾ ಫಲೇಷು ಕದಾಚನ. ಮಾನಸಿಕ ಅಸ್ವಸ್ಥತೆಯಿಂದ ಸಮಾಜ ಮತ್ತು ಬಂಧು ಬಾಂಧವರ ಅವಜ್ಞೆಗೊಳಗಾಗಿದ್ದ ಭಾರತಿ ತನ್ನ ಯೌವನದಲ್ಲಿ ಸುಂದರಿ, ಸುಶೀಲೆ ಹಾಗೂ ಕ್ರಿಯಾಶೀಲ ಹೆಣ್ಣಾಗಿದ್ದಳು. ತನ್ನ ಸ್ನೇಹಿತೆಯರು, ಅಕ್ಕ ಅರುಂಧತಿ ಮತ್ತು ಹೆತ್ತವರೊಂದಿಗೆ ಸಂತೋಷದಿಂದ ಇದ್ದಳು. ಅಕ್ಕ ಮದುವೆಯಾಗಿ ಗಂಡನ ಮನೆಗೆ ಹೋದ ಬಳಿಕ ಭಾರತಿಯ ನಡೆನುಡಿಗಳಲ್ಲಿ ವಿಲಕ್ಷಣ ಬದಲಾವಣೆ ಕಾಣತೊಡಗುತ್ತದೆ. ಅದು ಅತಿಯಾದಾಗ ಹೆತ್ತವರು ಮನೋತಜ್ಞರಿಗೆ ತೋರಿಸಿ ಯಾರಿಗೂ ತಿಳಿಯದಂತೆ ಮಗಳಿಗೆ ಚಿಕಿತ್ಸೆ ಕೊಡಿಸುತ್ತಾರೆ. ಮನೆಯಲ್ಲಿ ಒಬ್ಬಳೇ ಇರಲು ಬೇಸರವೆನಿಸಿ ಭಾರತಿ, ಒಂದು ಕಂಪನಿಯಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸಕ್ಕೆ ಸೇರುತ್ತಾಳೆ. ಅಲ್ಲಿ ಮೇನೇಜರ್ ಆಗಿದ್ದ ಗೌತಮನ ಪರಿಚಯ ಪ್ರೇಮವಾಗಿ ಮದುವೆಯೂ ಆಗುತ್ತದೆ. ಗೌತಮನ 'ಅತಿ' ಎನಿಸುವ ಪ್ರೇಮ ಸಾಂಗತ್ಯದಲ್ಲಿ ಭಾರತಿ ಪ್ರಪಂಚವನ್ನೇ ಮರೆಯುತ್ತಾಳೆ. ಹೆರಿಗೆಗಾಗಿ ಅವಳು ತಾಯಿ ಮನೆಗೆ ಬಂದಾಗಲೂ ಗೌತಮ್ ಅವಳನ್ನು ಬಿಟ್ಟಿರಲಾರದ ಮೋಹವನ್ನು ತೋರುತ್ತಾನೆ. ಐದು ತಿಂಗಳ ಕಾಲ ಕಾಯಲಾಗದೆ ತಾಯಿ ಮತ್ತು ಮಗು ಮಾನಸಳನ್ನು ತನ್ನ ಮನೆಗೆ ಕರೆದೊಯ್ಯುತ್ತಾನೆ. ಹೀಗೆ ಕಾದಂಬರಿ ಸಾಗುತ್ತದೆ. ಪ್ರಥಮ ಮುದ್ರಣ 2005, 2ನೇ ಮುದ್ರಣ 2016.
ಕಾದಂಬರಿಗಾರ್ತಿ ಆರತಿ ವೆಂಕಟೇಶ್ ಅವರು 1964 ಫೆಬ್ರವರಿ 15ರಂದು ಜನಿಸಿದರು. ತಂದೆ ನವರತ್ನರಾಮ್, ತಾಯಿ ಉಷಾ ನವರತ್ನರಾಮ್. ’ಆಶಾಕಿರಣ, ಅಮೃತಬಿಂದು, ನಿನಗಾಗಿ ನಾನೋಡಿ ಬಂದೆ, ಜೀವನ ಸಂಧ್ಯಾ, ಅಗೋಚರ, ಮುಕುಕಿದೀ ಮಬ್ಬಿನಲಿ, ಮಾಫಲೇಶುಕದಾಚನ, ಯಾವ ಮುರಳಿ ಕರೆಯಿತು, ತಲ್ಲಣಿಸದಿರು ಮನವೆ, ಧರಿತ್ರಿ’ ಮುಂತಾದ 30ಕ್ಕೂ ಹೆಚ್ಚು ಕಾದಂಬರಿ ರಚಿಸಿದ್ದಾರೆ. ...
READ MORE