ಕ್ಯಾದಿಗಿ ಬನದಾಗ ಕತೆಯಾಗಿ ನಿಂತವರು-ಗೀತಾ ನಾಗಭೂಷಣ ಅವರ ಕಾದಂಬರಿ. ಶೂದ್ರ, ದಲಿತ ಜಗತ್ತಿನ ಹಳ್ಳಿಯವರ ಬದುಕು ನೋವಿನಲ್ಲೇ ಮೊನಚು ಮುಳ್ಳುಗಳ ನಡುವೆಯೇ ಅರಳುತ್ತದೆ ಎಂಬುದನ್ನು ಈ ಕಾದಂಬರಿ ಚಿತ್ರಿಸುತ್ತದೆ. ಶೋಷಣೆ, ಕ್ರೌರ್ಯ, ದರ್ಪ, ದಬ್ಬಾಳಿಕೆಯಂತಹ ಕರಿನಾಗರಗಳ ನೆರಳಿನಲ್ಲೇ ತತ್ತರಿಸಿ ಹೆದರುತ್ತ ಕೆಲವೊಮ್ಮೆ ಸಂಘರ್ಷಕ್ಕಿಳಿಯುವ ಅವರ ಜೀವನ ವ್ಯವಸ್ಥೆಯನ್ನು, ಶೋಷಣೆಯ ಹಲವಾರು ಮಗ್ಗಲುಗಳನ್ನು ಬೆತ್ತಲೆಯಾಗಿಸಿದೆ.
ಕನ್ನಡದ ಲೇಖಕಿಯರಲ್ಲಿ ಒಬ್ಬರಾದ ಗೀತಾ ನಾಗಭೂಷಣ ಅವರು ತಮ್ಮ ಕಾದಂಬರಿ-ಕತೆಗಳ ಮೂಲಕ ಜನಪ್ರಿಯರಾದವರು. ಗುಲ್ಬರ್ಗದ ಬಡ ಕುಟುಂಬದಲ್ಲಿ 1942ರ ಮಾರ್ಚ್ 25ರಂದು ಜನಿಸಿದರು. ತಂದೆ ಶಾಂತಪ್ಪ-ತಾಯಿ ಶರಣಮ್ಮ. ಮೆಟ್ರಿಕ್ ಮುಗಿಸಿದ ಮೇಲೆ ಕೆಲವುಕಾಲ ಕಲೆಕ್ಟರ್ ಕಛೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಓದಿ ಪದವಿ ಪಡೆದು, ಸಂಜೆ ಕಾಲೇಜಿನಲ್ಲಿ ಓದಿ ಬಿಎಡ್ ಮತ್ತು ಎಂ.ಎ. ಪದವಿ ಗಳಿಸಿದರು. ಓದುವಾಗಲೇ ಉದ್ಯೋಗ ಮಾಡುತ್ತಿದ್ದ ಇವರು ಎಂ.ಎ. ಪದವಿ ಗಳಿಸಿದ ನಂತರ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ 30ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು. ...
READ MORE